ಜಿಲ್ಲೆ

ಖಾಸಗಿ ಬಸ್​ನಿಂದ ಬಿದ್ದು ವ್ಯಕ್ತಿ ಸಾವು

Haveri - Kariyappa Aralikatti

ರಟ್ಟಿಹಳ್ಳಿ: ಖಾಸಗಿ ಬಸ್​ನಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಬುಳ್ಳಾಪುರ ಕ್ರಾಸ್​ ಬಳಿ ಸೋಮವಾರ ನಡೆದಿದೆ.

ರಾಣೆಬೆನ್ನೂರ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ಬಸನಗೌಡ ಶಿವಪ್ಪ ಬೂದಿಹಾಳ (34) ಮೃತ ವ್ಯಕ್ತಿ.

ಈತ ಬಸ್​ನ ಬಾಗಿಲ ಬಳಿ ನಿಂತು ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ಬಸ್​ನಿಂದ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.