ಮದ್ದೂರು: ಮದ್ದೂರು-ಮಂಡ್ಯ ಮಾರ್ಗದ ಚನ್ನೇಗೌಡನದೊಡ್ಡಿ ಬಳಿ ಗುರುವಾರ ರಾತ್ರಿ ರೈಲಿಗೆ ಸಿಲುಕಿ ನಗರಕೆರೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ನಗರಕೆರೆ ಗ್ರಾಮದ ನಿಂಗೇಗೌಡ (52) ಮೃತರು. ಮನೆಯಿಂದ ಮದ್ದೂರು ಪಟ್ಟಣಕ್ಕೆ ತೆರಳಿದ್ದ ಇವರು, ಕಾರ್ಯನಿಮಿತ್ತ ಚನ್ನೇಗೌಡನದೊಡ್ಡಿಗೆ ಹೋಗುವಾಗ ರೈಲು ಬರುವುದು ತಿಳಿಯದೇ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ರೈಲಿಗೆ ಸಿಲುಕಿ ತಲೆ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಡ್ಯ ರೈಲ್ವೇ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ. ಶವವನ್ನು ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಅಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು.