ಶ್ರೀರಂಗಪಟ್ಟಣ ವಲಯ ಅಬಕಾರಿ ನಿರೀಕ್ಷಕ ವೈ.ಜೆ.ಪ್ರಪುಲ್ಲಚಂದ್ರ ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿ ಅಕ್ರಮವಾಗಿ 2.40 ಕೆ.ಜಿ ಒಣ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಎ.ಯೂನಸ್‌ನನ್ನು ಮಾಲು ಸಮೇತ ಬಂಧಿಸಿರುವುದು. ಅಬಕಾರಿ ಉಪನಿರೀಕ್ಷಕ ಶಿವಣ್ಣ, ಅಬಕಾರಿ ಹೆಡ್‌ಕಾನ್‌ಸ್ಟೆಬಲ್ ರಾಮು, ವಾಹನ ಚಾಲಕ ನಾಗರಾಜು ಹಾಗೂ ಹರವು ಗ್ರಾಪಂ ಸಿಬ್ಬಂದಿ ಇದ್ದರು. 
ಜಿಲ್ಲೆ

ಗಾಂಜಾ ಸಾಗಿಸುತ್ತಿದ್ದವ ಮಾಲು ಸಮೇತ ಬಂಧನ

ಶ್ರೀರಂಗಪಟ್ಟಣ: ಕಾರಿನಲ್ಲಿ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಪಾಂಡವಪುರ ಪಟ್ಟಣ ನಿವಾಸಿ ಎ.ಯೂನಸ್(23) ಬಂಧಿತ ಯುವಕ. ಈತ ಫೆ.18ರ ಮಂಗಳವಾರ ರಾತ್ರಿ 11ರ ಸಮಯದಲ್ಲಿ ತನ್ನ ಕಾರಿನಲ್ಲಿ 2.40 ಕೆ.ಜಿ.ಯಷ್ಟು ಒಣ ಗಾಂಜಾವನ್ನು ಕೆ.ಆರ್.ಪೇಟೆ - ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶ್ರೀರಂಗಪಟ್ಟಣ ವಲಯ ಅಬಕಾರಿ ನಿರೀಕ್ಷಕ ವೈ.ಜೆ.ಪ್ರಪುಲ್ಲಚಂದ್ರ, ಜಿಲ್ಲಾ ಅಬಕಾರಿ ಉಪ ಆಯುಕ್ತ ಡಾ.ಆರ್.ನಾಗಶಯನ ಮಾರ್ಗದರ್ಶನದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ಶಿವಣ್ಣ, ಅಬಕಾರಿ ಹೆಡ್ ಕಾನ್‌ಸ್ಟೆಬಲ್ ರಾಮು, ಹಾಗೂ ವಾಹನ ಚಾಲಕ ನಾಗರಾಜು ಮತ್ತು ಹರವು ಗ್ರಾಪಂ ಸಿಬ್ಬಂದಿ ಭಾಗಿಯಾಗಿದ್ದರು.