ಜಿಲ್ಲೆ

ಒಣಗಾಂಜಾ ಸಾಗಿಸುತ್ತಿದ್ದವನ ಬಂಧನ

ಎ. ಆರ್. ರಘುರಾಮ

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಳಕಟ್ಟೆ ಡೇರಿ ಬಳಿ ಒಣಗಾಂಜಾ ಸಾಗಿಸುತ್ತಿದ್ದವನನ್ನು ಮಂಗಳವಾರ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಕ್ಕಳ್ಳಿ ಸಮೀಪವಿರುವ ಎರಕಟ್ಟೆ ಗ್ರಾಮದ ನಿವಾಸಿ ನಂಜ (28), ಮತ್ತೊಬ್ಬ ನಂಜ (25) ಬಂಧಿತರು. ಕರಳಕಟ್ಟೆ ಡೇರಿ ಬಳಿಕ ಗಾಂಜಾ ಸಾಗಿಸುತ್ತಿದ್ದ ಖಚಿತ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಸುಪ್ರೀತ್ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದು. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 202 ಗ್ರಾಂ. ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಸಿ.ರಂಗಸ್ವಾಮಿ, ಕಾನ್ಸ್‌ಟೇಬಲ್‌ಗಳಾದ ವಿಜಯಕುಮಾರ್, ಮನೋಹರ್, ಚಾಲಕ ನಂಜುಂಡಸ್ವಾಮಿ ಇದ್ದರು.