ಬಂಧಿತ ಆರೋಪಿ ಶೇಖರ್ ಮೂರ್ತಿ. 
ಜಿಲ್ಲೆ

ವಿನೋಬನಗರದಲ್ಲಿ ವೇಶ್ಯಾವಾಟಿಕೆ, ವ್ಯಕ್ತಿ ಬಂಧನ

ಶಿವಮೊಗ್ಗ: ವಿನೋಬನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಮಹಿಳೆಯನ್ನು ರಕ್ಷಣೆ ಮಾಡಿದ್ದು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಹೊಸಮನೆ ನಿವಾಸಿ ಶೇಖರ್ ಮೂರ್ತಿ (45) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ವಿನೋಬನಗರ ಠಾಣೆ ಇನ್‌ಸ್ಪೆಕ್ಟರ್ ಚಂದ್ರಕಲಾ ನೇತೃತ್ವದ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.