ಜಿಲ್ಲೆ

ಗಾಂಜಾ ಸೇವಿಸಿದ್ದವನ ಬಂಧನ

ವೀರೇಶ ಸೌದ್ರಿ

ಭಟ್ಕಳ: ಗಾಂಜಾ ಸೇವಿಸಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಬಿಲಾಲಖಂಡದ ಗುಳ್ಳಿ ನಿವಾಸಿ ಮಹ್ಮದ್ ರಯ್ಯನ್ ಮಹ್ಮದ್ ಶಬೀರ್ (20) ಆರೋಪಿ. ಕೂಲಿ ಕೆಲಸ ಮಾಡಿಕೊಂಡಿರುವ ಈತನನ್ನು ಆಸರಕೇರಿಯ ಪಶುಪತಿ ದೇವಸ್ಥಾನದ ಹತ್ತಿರ ಪೊಲೀಸರು ವಶಕ್ಕೆ ಪಡೆದಿದ್ದರು. ಈತನ ಬಾಯಿಂದ ಘಾಟು ವಾಸನೆ ಬರುತ್ತಿದ್ದರಿಂದ ಮಾದಕ ಸೇವನೆ ಮಾಡಿದ ಸಂಶಯದ ಮೇಲೆ ಪಿಎಸೈ ನವೀನ ಎಸ್.ನಾಯ್ಕ ವಶಕ್ಕೆ ಪಡೆದಿದ್ದರು. ವಿಚಾರಣೆಯಲ್ಲಿ ಈತ ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಅಲ್ಲದೆ, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.