ಜಿಲ್ಲೆ

ಮನೆ ಕಳವಿಗೆ ಯತ್ನಿಸುತ್ತಿದ್ದವನ ಸೆರೆ

ಬಸವರಾಜ ವೀರಪ್ಪ ಗರಗ

ಭಟ್ಕಳ: ತಾಲೂಕಿನ ವೆಂಕಟಾಪುರದ ಐಸ್ ಫ್ಯಾಕ್ಟರಿ ಮೀನಾ ರಸ್ತೆಯಲ್ಲಿ, ಮನೆ ಬಾಗಿಲು ಮುರಿದು ಒಳ ನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಬಂಧಿಸಿದ್ದಾರೆ.

ಉಡುಪಿಯ ಆಕೀಫ್ ಮೊಹ್ಮದ್ ಅಬ್ದುಲ್ ಅಜೀಮ್ ಬುಡಾನ್ ಬಾಷಾ (19) ಬಂಧಿತ.

ಈತನ ವಿರುದ್ಧ ಈಗಾಗಲೇ ಬೈಂದೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಿವೆ. ಬೈಂದೂರಿನಲ್ಲಿ ನಡೆದಿದ್ದ ಕಾರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿ 2 ದಿನಗಳ ಹಿಂದೆಯಷ್ಟೇ ಈತ ಬಿಡುಗಡೆಗೊಂಡಿದ್ದ ಎಂದು ತಿಳಿದು ಬಂದಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಸಿಪಿಐ ಮಂಜುನಾಥ ಮತ್ತು ಎಸ್​ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.