ಜಿಲ್ಲೆ

ಪೆಹಲ್ಗಾವ್ ದಾಳಿಯಲ್ಲಿ ಮೃತರ ಸದ್ಗತಿಗಾಗಿ ತಿಲತರ್ಪಣ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಾಶ್ಮೀರದ ಪೆಹೆಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರ ಸದ್ಗತಿಗಾಗಿ ಪ್ರಾರ್ಥಿಸಿ ಅಭಿನವ ಭಾರತ್ ಸಂಘಟನೆಯಿAದ ಸೋಮವಾರ ಮಲ್ಪೆಯ ಹನುಮಾನ್ ವಿಠೋಭಾ ಭಜನಾ ಮಂದಿರದ ಹೊರಭಾಗದಲ್ಲಿ "ಗೀತಾ ತ್ರಿಷ್ಟುಪ್ ಹೋಮ" ಹಾಗೂ ಮಲ್ಪೆ ಸಮುದ್ರದಲ್ಲಿ ತಿಲತರ್ಪಣ ನಡೆಯಿತು.

ಅಭಿನವ ಭಾರತ್ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ ಸಮಾಜ, ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಇದು ಘೋರ ದುರಂತ ಎಂದು ವಿಷಾದಿಸಿದರು.

ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನ ಮಾತು ಗೀತಾ ತ್ರಿಷ್ಟುಪ್. ಗೀತಾ ತ್ರಿಷ್ಟುಪ್ ಮಂತ್ರದಿAದ ಸಾವಿರ ಸಂಖ್ಯೆಯ ಜಪ ಮಾಡಿ ಹೋಮ ನಡೆಸಲಾಗಿದೆ. ಮೃತ ೨೫ ಮಂದಿಯ ಪರವಾಗಿ ೨೫ ಕಾರ್ಯಕರ್ತರು ತಿಲತರ್ಪಣ ಬಿಟ್ಟು ಸಮುದ್ರದಲ್ಲಿ ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಕುಟುಂಬ ಸದಸ್ಯರು ಮೃತಪಟ್ಟರೆ ಪ್ರತೀವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀವರ್ಷ ತರ್ಪಣ ಬಿಡುತ್ತೇವೆ. ಹಿಂದು ಸಮುದಾಯ ಕುಟುಂಬ ಎಂಬ ಪರಿಕಲ್ಪೆನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವೇದಮೂರ್ತಿ ಸುರಾಲು ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಉದ್ಯಮಿ ಅಜಯ್ ಕೊಡವೂರು, ಹಿಂದೂ ಸಂಘಟನೆ ಮುಖಂಡ ಪಾಂಡುರAಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.