ಜಿಲ್ಲೆ

ಮಲ್ಪೆ ಬಂದರಿನಲ್ಲಿ ಜೆಟ್ಟಿ ವಿಸ್ತರಣೆಗೆ ಸ್ಥಳ ಪರಿಶೀಲನೆ

ಉಡುಪಿ: ಮಲ್ಪೆ ಬಂದರಿನಲ್ಲಿ ಔಟರ್​ ಹಾರ್ಬರ್​, ಪಡುಕರೆ ಭಾಗದಲ್ಲಿ ನಾಡದೋಣಿ ಮತ್ತು ಯಾಂತ್ರಿಕ ದೋಣಿಗಳಿಗೆ 600 ಮೀ ಉದ್ದ ಜೆಟ್ಟಿ ನಿರ್ಮಾಣ ಮಾಡುವ ಬಗ್ಗೆ ನೀಲನಕ್ಷೆಯನ್ನು ತಯಾರಿಸುವಂತೆ ಶಾಸಕ ಯಶ್​ಪಾಲ್​ ಎ. ಸುವರ್ಣ ಅವರು ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಮಲ್ಪೆ ಮೀನುಗಾರ ಸಂದ ಮುಖಂಡರೊಂದಿಗೆ ಯೋಜಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯಸಂಪದ ಮತ್ತು ಸಾಗರಮಾಲ ಯೋಜನೆಯಡಿ ಮಲ್ಪೆಯಲ್ಲಿ ಔಟರ್​ ಹಾರ್ಬರ್​ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

5000 ಬೋಟು ತಂಗಲು ಅವಕಾಶ
ಮಲ್ಪೆ ಬಂದರಿನಲ್ಲಿ ಬೋಟು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿಂದ ಮೀನುಗಾರರು ಹಲವಾರು ವರ್ಷದಿಂದ ತೊಂದರೆಗೊಳಗಾಗುತ್ತಿದ್ದಾರೆ. ಬಂದರಿಗೆ ದಕ್ಷಿಣ ಭಾಗದಲ್ಲಿ ಭದ್ರಗಢ ಲೈಟ್​ಹೌಸ್​, ಕೋಟೆ, ಮಾಲ್ತಿಕಲ್ಲು ಇರುವುದರಿಂದ ಇವೆಲ್ಲವನ್ನು ಆವರಿಸಿ ನೀರಿನ ತಡೆಮಾಡಿ ಔಟರ್​ ಹಾರ್ಬರ್​ ಮಾಡಿದರೆ ಸುಮಾರು 5 ಸಾವಿರ ಬೋಟ್​ ನಿಲ್ಲಿಸಬಹುದಾಗಿದೆ ಎಂದರು.

ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್​ ಆರ್​., ಸಹಾಯಕ ನಿರ್ದೇಶಕ ಕುಮಾರ ಸ್ವಾಮಿ, ಬಂದರು ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್​ ಜಯರಾಜ್​, ಸಹಾಯಕ ಎಂಜಿನಿಯರ್​ ಪ್ರಶಾಂತ್​, ಮಲ್ಪೆ ಮೀನುಗಾರ ಸಂದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉಪಾಧ್ಯಕ್ಷ ನಾಗರಾಜ್​ ಸುವರ್ಣ, ಕಾಯದರ್ಶಿ ಜಗನ್ನಾಥ್​ ಕಡೆಕಾರು, ರತ್ನಾಕರ ಸಾಲ್ಯಾನ್​, ಸಂತೋಷ್​ ಮೊದಲಾದವರು ಉಪಸ್ಥಿತರಿದ್ದರು.