ಉಡುಪಿ: ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಒಪ್ಪಿಕೊಳ್ಳುವಂತಹದ್ದಲ್ಲ. ಮೀನು ಕಳವು ಮಾಡಿದ್ದರೇ ನೇರವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು. ಪ್ರಕರಣ ದಾಖಲಾದ ಮೇಲೆ ನ್ಯಾಯಾಲಯದಲ್ಲಿ ತೀಮಾರ್ನವಾಗಬೇಕು. ಪ್ರತಿಭಟನೆ ಮಾಡಿದರೂ ಕೇಸು ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಅಮಾನುಷ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು. ಮಲ್ಪೆ ಬಂದರಿನಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆಯುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖೆ ಗಮನಹರಿಸಬೇಕು. ಬಂದರು ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಸಿಸಿಟಿವಿ ಅಳವಡಿಸಬೇಕು ಎಂದರು.
ಹನಿಟ್ರಾಪ್ ಒಳಗಾದವರದ್ದೇ ತಪು
ಯಾರೂ ಹನಿಟ್ರಾ$್ಯಪ್ಗೆ ಒಳಗಾಗಬಾರದು. ನೈತಿಕತೆ ಇದ್ದವರು ಹನಿ ಟ್ರ್ಯಾಪ್ಗೆ ಸಿಕ್ಕೀಬಿಳುವುದಿಲ್ಲ. ಟ್ರಾ$್ಯಪ್ ಆದವರದ್ದೇ ತಪ್ಪಾಗುತ್ತದೆ. ಈ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆಂದು ಸರ್ಕಾರ ಹೇಳಿದೆ. ನಮ್ಮ ಕಾಲದ ರಾಜಕಾರಣಕ್ಕೂ ಇಂದಿಗೂ ಬಹಳಷ್ಟು ಬದಲಾವಣೆಯಾಗಿದೆ. ಜನಪ್ರತಿನಿಧಿಗಳ ಆಯ್ಕೆ ಮಾಡುವಾಗ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
ವಿರೋಧಪಕ್ಷದಲ್ಲೂ ಕೆಲಸ ಮಾಡಬಹುದು
ಕರಾವಳಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅನುದಾನಗಳೆಲ್ಲ ಬರುವುದು ಶಾಸಕರಿಗೆ. ಹೀಗಾಗಿ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಶಾಸಕರಿಗಿದೆ. ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇಲ್ಲ. ವಿರೋಧ ಪಕ್ಷದವರು ಸರ್ಕಾರವನ್ನು ದೂರುವುದು ಸ್ವಾಭಾವಿಕ. ನಾನು ಪಕ್ಷೇತರನಾಗಿಯೂ ಕೆಲಸ ಮಾಡಿದ್ದೇನೆ ಎಂದರು.