ಉಡುಪಿ: ನವರಾತ್ರಿಯೆಂದರೆ ನಾಡಹಬ್ಬ. ನಾಡಿನ ಸಮಸ್ತ ಜನತೆಯೂ ಸಂತೋಷ ನೆಮ್ಮದಿ ಸಂಭ್ರಮಗಳಿಂದ ಹಬ್ಬ ಆಚರಿಸುವಂತಾಗಬೇಕು. ಭಕ್ತಿ ಸಡಗರದ ಜೊತೆಗೆ ಅರ್ಹ ಬಡಕುಟುಂಬಕ್ಕೆ ಮನೆ ಕಟ್ಟಿಕೊಡುವ ಕೆಲಸದಿಂದ ನಾಡಹಬ್ಬ ಸಾರ್ಥಕವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸ್ಥಳಿಯ ಮಲ್ಪೆ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಬೀಚ್ , ಶ್ರೀ ಶಿವಪಂಚಾಕ್ಷರಿ ಭಜನಾ ಮಂದಿರ ಕೊಳ , ಶ್ರೀ ಬಾಲಕರ ರಾಮ ಭಜನಾ ಮಂದಿರ, ಹನುಮಾನ್ ವಿಠೋಭ ಭಜನಾ ಮಂದಿರ, ತೊಟ್ಟಂ ಶ್ರೀ ಭಕ್ತಿ ಉದಯ ಪಂಡರಿನಾಥ ಭಜನಾ ವತಿಯಿಂದ ಕಮಲಾ ಕೋಟ್ಯಾನ್ ಎಂಬುವವರಿಗೆ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಾಗುವ ಮನೆಗೆ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಈ ಬಾರಿ ಕರಾವಳಿಯಲ್ಲಿ ಮತ್ಸ್ಯಕ್ಷಾಮದ ಭೀತಿ ಎದುರಾಗಿದೆ. ಆ ನಡುವೆಯೂ ಇಂಥಹ ಸತ್ಕಾರ್ಯದ ಮೂಲಕ ಬಡವರ ಕಣ್ಣೀರೊರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪೇಜಾವರ ಶ್ರೀಗಳು ಸಮಸ್ತ ಹಿಂದೂ ಸಮಾಜಕ್ಕೆ ಸತೆರಣೆ ನೀಡುತ್ತಿದ್ದಾರೆ ಎಂದರು.
ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ , ನಗರಸಭಾ ಸದಸ್ಯೆ ಲಕ್ಷಿ ಮಂಜುನಾಥ , ತಾರಾನಾಥ ಕುಂದರ್, ರವಿ ಕರ್ಕೇರ, ರವಿ ಸಾಲ್ಯಾನ್ , ಸೇಸಪ್ಪ ಸಾಲ್ಯಾನ್ ಸದಾನಂದ ಸಾಲ್ಯಾನ್ , ನಾಗೇಶ ಸಾಲ್ಯಾನ್, ಧನಂಜಯ ತೊಟ್ಟಂ, ರಾಘವ ಕುಂದರ್, ಮಿಥುನ್ ಕುಂದರ್ , ರಾಧಾಕೃಷ್ಣ ಮೆಂಡನ್, ರಾಕೇಶ್, ಸಂತೋಷ್ ಸಾಲ್ಯಾನ್ , ವಿಕ್ರಮ್ ಶ್ರೀಯಾನ್ ಮೊದಲಾದವರಿದ್ದರು . ಮಂಜುನಾಥ ಸಾಲ್ಯಾನ್ ಸಹಕರಿಸಿದರು . ನಂದನ್ ಭಟ್ ಧಾರ್ಮಿಕ ವಿಧಾನ ನೆರವೇರಿಸಿದರು. ಜಿ ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.