ಜಿಲ್ಲೆ

ಅಪೌಷ್ಟಿಕತೆಯಿಂದ ಅನಾರೋಗ್ಯ ಉಲ್ಬಣ

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಜಡವಾದ ಜೀವನ ಶೆಲಿಯಿಂದ ಸಣ್ಣ ವಯಸ್ಸಿಗೆ ಮೂಳೆನೋವು ಕಾಣಿಸಿಕೊಳ್ಳುತ್ತಿದೆ ಎಂದು ಎಲುಬು ಕೀಲು ತ ಡಾ.ಹೇಮಂತ ಭಸ್ಮೆ ಹೇಳಿದರು.

ಪಟ್ಟಣದ ಕೋರ್ಟ್​ ಆವರಣದಲ್ಲಿ ಜೇಂಟ್ಸ್​ ಗ್ರೂಪ್​ ಸವದತ್ತಿ ಸಹಯೋಗದಲ್ಲಿ ಶ್ರೀ ಹಾಸ್ಪಿಟಲ್​ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ನ್ಯಾಯಮೂರ್ತಿ ಸಿದ್ಧರಾಮ ರೆಡ್ಡಿ ಉದ್ಘಾಟಿಸಿದರು. ಬಿಪಿ, ಶುಗರ್​ ಹಾಗೂ ಔಷಧ ಉಚಿತವಾಗಿ ನೀಡಲಾಯಿತು. 200ಕ್ಕೂ ಹೆಚ್ಚಿನ ಜನರು ಶಿಬಿರದ ಸದುಪಯೋಗ ಪಡೆದರು. ಡಾ. ನಯನಾ ಭಸ್ಮೆ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದರು. ನ್ಯಾಯಾಧೀಶ ಕಷ್ಣಪ್ಪ ಪಮಾರ, ನಾಗರಾಜ ಬೋಣಗೇರಿ, ಎಂ.ಎಂ. ಎಲಿಗಾರ, ಜೆ.ಬಿ. ಮುನವಳ್ಳಿ ಇದ್ದರು.