ಜಿಲ್ಲೆ

ಭಕ್ತಿಯ ಪ್ರಾರ್ಥನೆಗೆ ಫಲ ಖಚಿತ

ಇಂದಿರಾ ಎನ್ ಕೆ

ಗಂಗೊಳ್ಳಿ : ಭಕ್ತಿಯಿಂದ ದೇವರಿಗೆ ಸಲ್ಲಿಸಿದ ಪ್ರಾರ್ಥನೆಗೆ ಖಂಡಿತ ಫಲ ಸಿಗುತ್ತದೆ. ಸತ್ಕರ್ಮಗಳನ್ನು ನಿರಂತರ ಮಾಡುತ್ತಾ ಹೋಗಬೇಕು. ಯಾವುದೇ ಫಲ ನಿರೀಕ್ಷಿಸಬಾರದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮೊಕ್ಕಾಂ ನಿಮಿತ್ತ ಗುರುವಾರ ಚಿತ್ತೈಸಿದ ಶ್ರೀಗಳು ಆಶೀರ್ವಚನ ನೀಡಿದರು. ದೇವಸ್ಥಾನ ಆಡಳಿತ ಮಂಡಳಿಯ ಜಿ.ವೇದವ್ಯಾಸ ಕೆ.ಆಚಾರ್ಯ ಮತ್ತು ಜಿ.ವೆಂಕಟೇಶ ನಾಯಕ್ ಗುರುಗಳ ಪಾದಪೂಜೆ ಮಾಡಿದರು. ದೇವಸ್ಥಾನ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ತಾಂತ್ರಿಕ ಜಿ.ವಸಂತ ಭಟ್, ಎಸ್.ಪಾಂಡುರಂಗ ಆಚಾರ್ಯ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಮಠಕ್ಕೆ 550ವರ್ಷ ಪೂರ್ಣಗೊಳ್ಳುವ ಸಂದರ್ಭ ಹಮ್ಮಿಕೊಳ್ಳಲಾದ ಶ್ರೀ ರಾಮ ನಾಮ ತಾರಕ ಜಪ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಶಕ್ತ್ಯಾನುಸಾರ ಜಪ ಮಾಡಿ ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮುಂದಿನ ವರ್ಷ ಪರ್ತಗಾಳಿ ಮಠದಲ್ಲಿ ಈ ಸಂಬಂಧ ದೊಡ್ಡ ಧಾರ್ಮಿಕ ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜಬಾಂಧವರು ಪಾಲ್ಗೊಂಡು ದೇವರು ಮತ್ತು ಗುರುಗಳಿಗೆ ಸೇವೆ ಸಲ್ಲಿಸುವಂತಾಗಬೇಕು. -ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ https://www.vijayavani.net/ganeshotsava-celebration-preparatory-meeting https://www.vijayavani.net/inaugurates-nursery-class