ಜಿಲ್ಲೆ

ಗಾಂಜಾ ಸೇವನೆ ಇಬ್ಬರ ಬಂಧನ

ಹರೀಶ ಎಂ.

ಮಂಗಳೂರು: ಮಲ್ಲೂರು ಬದ್ರಿಯಾ ನಗರದ ಬಳಿ ಅಮಲು ಪದಾರ್ಥ ಗಾಂಜಾ ಸೇವನೆ ಮಾಡಿದ ಇಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

]
ಮಲ್ಲೂರು ಬದ್ರಿಯಾ ನಗರದ ಮಹಮ್ಮದ್ ತಮೀಮ್ (35) ಮತ್ತು ಪಣಂಬೂರು ಗ್ರಾಮ ಕಸಬ ಬೆಂಗ್ರೆಯ ಮೊಹಮ್ಮದ್ ಶಾಫಿ ಯಾನೇ ಜಾಫಿರ್ (25) ಬಂಧಿತ ಆರೋಪಿಗಳು.


ಠಾಣಾ ನಿರೀಕ್ಷಕ ಜಾನ್ಸನ್ ಡಿಸೋಜ ಅವರು ಸಿಬಂದಿಯೊಂದಿಗೆ ಬುಧವಾರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ತೆರಳುತಿದ್ದ ವೇಳೆ ಮಲ್ಲೂರು ಗ್ರಾಮದ ಬದ್ರಿಯಾ ನಗರದ ಬಳಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಈ ಇಬ್ಬರು ನಶೆಯಲ್ಲಿರುವುದು ಕಂಡು ಬಂದಿದೆ. ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.