ಮುದ್ದೇಬಿಹಾಳ: ಹಾಲುಮತ ಪರಂಪರೆಯಲ್ಲಿ ಹಾಲುಮತದವರು ತಮ್ಮ ಹಿರಿಯರನ್ನು ದೇವರಂತೆ ಕಾಣುತ್ತಾರೆ. ಹಿರಿಯರನ್ನು ದೇವರೆಂದು ಪೂಜಿಸಿ ಜಾತ್ರೆ, ಹಬ್ಬ ಮಾಡುತ್ತಾರೆ.
ಇದು ಹಾಲುಮತ ಸಮಾಜದ ವಿಶೇಷತೆಯಾಗಿದೆ. ದೇವರ ಜಾತ್ರೆ, ಹಬ್ಬ ಹಾಕುವುದು, ಸಾಮೂಹಿಕ ವಿವಾಹ ಮಾಡುವುದು ಈ ಪರಂಪರೆಯಲ್ಲಿ ಸುಲಭದ ಕಾರ್ಯವಲ್ಲ ಎಂದು ಹಾಲುಮತ ಮೂಲ ಗುರುಪೀಠದ ಶಾಖಾಮಠ ಅಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ನುಡಿದರು.
ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಮದರಿ (ಪೂಜಾರಿ) ಪರಿವಾರದವರ ನೇತತ್ವದಲ್ಲಿ ಸೋಮವಾರ ನಡೆದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಕಾಡಸಿದ್ಧೇಶ್ವರ ಜಾತ್ರೆ, ದಯಗೊಂಡ ಗೌಡನು ಬೀರಲಿಂಗೇಶ್ವರನಿಗೆ ಹಬ್ಬ ಹಾಕುವ (ವಿಶೇಷ ಪೂಜೆ ಸಲ್ಲಿಸುವ) ಕಾರ್ಯಕ್ರಮ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಾಲೂಕು ಕುರುಬರ ಸಂದ ಅಧ್ಯ ಮಲ್ಲಿಕಾರ್ಜುನ ಮದರಿಯವರು ಸಮಾಜ ಸೇವೆ, ಧಾರ್ಮಿಕ ಸೇವೆಯಲ್ಲಿ ಇತರರಿಗೆ ಮಾದರಿಯಾದ ಕಾರ್ಯಮಾಡುತ್ತಿದ್ದಾರೆ.
ಮದರಿ ಪರಿವಾರದವರು ಗುರುಗಳನ್ನು, ಹಿರಿಯರನ್ನು ಗೌರವಿಸುವ ಸತ್ಸಂಪ್ರದಾಯ ಹೊಂದಿದ್ದಾರೆ. ಬೀರಲಿಂಗೇಶ್ವರ ಹಬ್ಬ, ಮಾಯಮ್ಮಾ ಹಬ್ಬ ಹೀಗೆ ಹಲವು ಹಿರಿಯರ ಹಬ್ಬಗಳನ್ನು ಜಾತ್ರೆಯಾಗಿ ಆಚರಿಸುವುದು ಸಮಾಜಕ್ಕೆ ಸಂಪ್ರದಾಯದ ಮಹತ್ವ ತಿಳಿಸಿಕೊಡುವಂಥದ್ದಾಗಿದೆ ಎಂದರು.
ಜಾತ್ರೆಯ ರೂವಾರಿ, ಮುದ್ದೇಬಿಹಾಳ ಅಹಲ್ಯಾದೇವಿ ಶಿಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಅವರು ಮಾತನಾಡಿ, ಕಳೆದ 17 ವರ್ಷಗಳಿಂದ ಜಾತ್ರೆಯನ್ನು ಈ ಭಾಗದ ಸಮಸ್ತ ಗುರುಗಳ, ಹಿರಿಯರ ಆಶೀರ್ವಾದದಿಂದ ಮಾಡಿಕೊಂಡು ಬರಲಾಗುತ್ತಿದೆ. ಸಾಮೂಹಿಕ ವಿವಾಹಗಳಿಗೆ ನಮ್ಮ ಪರಿವಾರದವರ ಸಹಕಾರ ಇದೆ. ಈ ಬಾರಿ 12 ಜೋಡಿ ವಧು&ವರರು ಗುರುಗಳ ಆಶಿರ್ವಾದದೊಂದಿಗೆ ನವದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಪರಿವಾರದ ಹಿರಿಯರಾದ ನಮ್ಮ ತಂದೆ ನೀಲಕಂಠಪ್ಪ ಪೂಜಾರಿ (ಮದರಿ) ಅವರ ಬಹು ದಿನಗಳ ಅಪೇೆಯಂತೆ ಜಾತ್ರೆಯಲ್ಲಿ ಈ ಬಾರಿ ದಯಗೊಂಡ ಗೌಡನು ಬೀರಲಿಂಗೇಶ್ವರನಿಗೆ ಹಬ್ಬ ಹಾಕುವ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಿದ್ದೆವು. ಮೂರು ದಿನಗಳ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸಕರ ಎಂದರು.
ಹಾಲುಮತ ಸಮಾಜದ ಗುರುಗಳಾದ ಖಿಲಾರಹಟ್ಟಿಯ ರಾಮಾನಂದ ಸ್ವಾಮೀಜಿ, ಅರವಿಂದ ಒಡೆಯರು, ಶಿವಯ್ಯ ಗುರುವಿನ, ಬಂಡೆಪ್ಪಹಳ್ಳಿಯ ಸಣ್ಣಕ್ಕಿಮುತ್ಯಾ, ಮುದ್ದೇಬಿಹಾಳ ಪಿಕಾರ್ಡ್ ಬ್ಯಾಂಕ್ ಅಧ್ಯ ಬಿ.ಕೆ. ಬಿರಾದಾರ, ಅಹಲ್ಯಾದೇವಿ ಶಿಣ ಸಂಸ್ಥೆಯ ಸಂಸ್ಥಾಪಕ ಅಧ್ಯರಾದ ನೀಲಕಂಠಪ್ಪ ಪೂಜಾರಿ, ದಿ. ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕಿ ಶ್ರೀದೇವಿ ಮದರಿ, ಭೀಮಶೆಪ್ಪ ಮದರಿ, ರವಿ ಜಗಲಿ, ಮದರಿ ಪರಿವಾರದವರು, ಖಿಲಾರಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
3 ದಿನಗಳ ಜಾತ್ರೆ ಸಮಾರೋಪ: ಭಾನುವಾರ ಜಾತ್ರೆಯ ಮೊದಲ ದಿನ ಸಂಪ್ರದಾಯದಂತೆ ಸಕಲ ವಾದ್ಯ ವೆಭವಗಳೊಂದಿಗೆ ಪಂಚ ಪಲ್ಲಕ್ಕಿಗಳನ್ನು ಗಂಗಸ್ಥಳಕ್ಕೆ ಕರೆದೊಯ್ದು ನಂತರ ಶ್ರದ್ಧಾಭಕ್ತಿಯಿಂದ ಊರೊಳಕ್ಕೆ ಕರೆತರಲಾಯಿತು. ಸೋಮವಾರ ಬೆಳಗ್ಗೆ ದಯಗೊಂಡ ಗೌಡನು ಬೀರಲಿಂಗೇಶ್ವರನಿಗೆ ಹಬ್ಬ (ವಿಶೇಷ ಪೂಜೆ) ಹಾಕುವ ಕಾರ್ಯಕ್ರಮ ಮದರಿ ಪರಿವಾರದವರ ನೇತತ್ವದಲ್ಲಿ ನಡೆಯಿತು. ರಾತ್ರಿ ನಾಲತವಾಡದ ವೀರೇಶ್ವರ ನಾಟ್ಯ ಸಂದವರಿಂದ ಖ್ಯಾತ ಹಾಸ್ಯ ಕಲಾವಿದ ಸಿದ್ದು ನಾಲತವಾಡ ನೇತತ್ವದ ಹಳ್ಳಿ ಹುಡುಗಿ, ಮೊಸರ ಗಡಗಿ ಸಾಮಾಜಿಕ ನಾಟಕ ಪ್ರದರ್ಶನ ನೆರವೇರಿತು. ಮಂಗಳವಾರ ಬೆಳಗ್ಗೆ ಪದವಿವರೆಗಿನ ಯುವಕ, ಯುವತಿಯರಿಗಾಗಿ ರಸಪ್ರಶ್ನೆ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ತೆರಬಂಡಿ ಸ್ಪರ್ಧೆ, 2 ಹಲ್ಲಿನ, 4 ಹಲ್ಲಿನ ಟಗರಿನ ಕಾಳಗ ಏರ್ಪಡಿಸಿ ಸಂಜೆ ಮೂರು ದಿನಗಳ ಜಾತ್ರೋತ್ಸವ ಸಮಾರೋಪಗೊಳಿಸಲಾಯಿತು.