Mallikarjuna Kambi's Eid celebration  
ಜಿಲ್ಲೆ

ಮಲ್ಲಿಕಾರ್ಜುನ ಕಂಬಿಯ ಐದೇಶಿ ಆಚರಣೆ

Vijayapura - Desk - Doddanagouda Gudihindin

ಮಹಾಲಿಂಗಪುರ: ಪಟ್ಟಣಕ್ಕೆ ಭಾನುವಾರ ಆಗಮಿಸಿದ ಶ್ರೀಶೈಲ ಮಲ್ಲಯ್ಯನ ಕಂಬಿಯನ್ನು ಸಕಲ ವಾದ್ಯಗಳೊಂದಿಗೆ ಪಟ್ಟಣದೊಳಗೆ ಬರಮಾಡಿಕೊಳ್ಳಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ಕಂಬಿಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಐದೇಶಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಹಿಳೆಯರು, ಮಕ್ಕಳೆನ್ನದೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಕಂಬಿಮಲ್ಲಯ್ಯನಿಗೆ ಆರತಿ ಬೆಳಗಿ ನಮಸ್ಕರಿಸಿದರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಶ್ರೀಶೈಲ ಮಠದ, ಈಶ್ವರ ಮಠದ, ನಾರಾಯಣಗೌಡ ಪಾಟೀಲ, ವಿಜಯಕುಮಾರ ಕುಳ್ಳೋಳ್ಳಿ, ಯಲ್ಲಪ್ಪ ಹಟ್ಟಿ, ಸಿದ್ದಯ್ಯ ಮಠದ, ಮಹಾಂತೇಶ ಮಠಪತಿ ಮತ್ತಿತರರಿದ್ದರು.