ಕಲಕೇರಿ: ಮಕ್ಕಳಲ್ಲಿರುವಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಸದುಪಯೋಗ ಪಡೆದುಕೊಳ್ಳಬೆಕು ಎಂದು ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ ಹೇಳಿದರು.
ಗ್ರಾಮದ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಸಿಂದಗಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಕಲಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಪ್ರತಿಭೆಯಿದ್ದರೂ ಸಹ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಶಿಕ್ಷಕರು, ಸಂಘ-ಸಂಸ್ಥೆಗಳು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಇಸಿಒ ಐ.ಎ್.ಭಾಲ್ಕಿ, ಬಿಆರ್‌ಪಿ ಜೆ.ಎಸ್.ಅಲ್ದಿಮಠ, ಸಿಆರ್‌ಪಿ ಶ್ರೀಶೈಲ ನಾಯ್ಕೋಡಿ ಮಾತನಾಡಿದರು. ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಿಂಗಯ್ಯ ಹಿರೇಮಠ, ಕೆಎಎಸ್ ಅಧಿಕಾರಿ ಕನಕರಾಜ್ ವಡ್ಡರ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಕಾರಂಜಿಯ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಹ್ಮದ್ ಸಿರಸಗಿ, ಪರಶುರಾಮ ಬೇಡರ್, ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ, ಷಣ್ಮುಕಪ್ಪ ಝಳಕಿ, ಅಪ್ಪಾಸಾಬ ಗುಮಶೆಟ್ಟಿ, ದೇವಿಂದ್ರ ಗುಮಶೆಟ್ಟಿ, ಸಚಿನ್ ಝಳಕಿ, ಸಿ.ಎಸ್.ಹಿರೇಮಠ, ಜೆ.ಬಿ.ಗುಮಶೆಟ್ಟಿ, ಜೆ.ಬಿ.ಕುಲಕರ್ಣಿ, ಬಿ.ಬಿ.ಕೋಟಿಖಾನಿ, ಕೆ.ಎಚ್.ವಡ್ಡರ, ದುಂಡಯ್ಯ ಚಿಕ್ಕಮಠ, ಗುರುರಾಜ ಕೌದಿ, ಎಂ.ಎನ್.ಮುಜಾವರ, ಎಸ್.ಬಿ.ಕಬ್ಬಿನ್, ಶಿವಾನಂದ ಪಟ್ಟಣಶೆಟ್ಟಿ, ನಾನಾಗೌಡ ಚೌದ್ರಿ, ಬಸವರಾಜ ದೇವರಮನಿ, ಸಿದ್ದು ಅಸ್ಕಿ, ಪರುತಯ್ಯ ಹಿರೇಮಠ ಇತರರಿದ್ದರು.