ಜಿಲ್ಲೆ

ಮಲ್ಲಿಕಾರ್ಜುನ ಕ್ಷೇತ್ರ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಸೌಮ್ಯ ಆರ್

ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾರ್ಚ್ 19ರಿಂದ 23ರವರೆಗೆ ಜರುಗಲಿರುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಶ್ರೀಪಾದರ ಉಪಸ್ಥಿತಿಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೆಂಟ್ ಕಮಿಷನರ್ ಕೆ.ಪಿ.ಪ್ರದೀಪ್ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕ್ಷೇತ್ರ ಆಡಳಿತ ಸಮಿತಿ ಟ್ರಸ್ಟಿ ಅಧ್ಯಕ್ಷ, ವಕೀಲ ಎ.ಗೋವಿಂದನ್ ನಾಯರ್, ವಾರ್ಡ್ ಸದಸ್ಯೆ ಎ.ಶ್ರೀಲತಾ, ಧಾರ್ಮಿಕ ಮುಂದಾಳು ಡಾ.ಅನಂತ ಕಾಮತ್, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಂ.ಮಹೇಶ್, ಸ್ವರ್ಣ ಉದ್ಯಮಿಗಳಾದ ಶೋಭಾ, ಅಭಿಲಾಷ್, ಡಾ.ಅಜಿತೇಶ್, ಅರ್ಜುನನ್ ತಾಯಲಂಗಾಡಿ, ಟ್ರಸ್ಟಿ ಬೋರ್ಡ್ ಸದಸ್ಯೆ ಉಷಾ ಅರ್ಜುನನ್, ಸದಸ್ಯರಾದ ಉಮೇಶ್ ಅಣಂಗೂರು, ಮನೋಜ್ ಎ.ಸಿ., ಎಸ್.ವಿಟಿ. ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಹರೀಶ್ ಕೆ.ಆರ್. ಮೊದಲಾದವರು ಉಪಸ್ಥಿತರಿದ್ದರು.