?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಪೊಲೀಸರಿಂದ ಕಳ್ಳತನವಾಗಿದ್ದ ಮನೆಯ ಮಹಜರು

ಕಿರಣ್ ಗೌಡ.ಜಿ

ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ಇತ್ತೀಚೆಗೆ ವೃದ್ಧೆಯೊಬ್ಬರು ವಾಸಿಸುತ್ತಿದ್ದ ಮನೆಯಲ್ಲಿ ಚಿನ್ನದ ಸರ ಹಾಗೂ ನಗದು ಕಳ್ಳತನವಾಗಿದ್ದ ಸ್ಥಳವನ್ನು ಭಾನುವಾರ ಪೊಲೀಸರು ಮಹಜರು ನಡೆಸಿದರು.

ಗ್ರಾಮದ ಲೇ. ನಿಂಗಣ್ಣ ಅವರ ಪತ್ನಿ ಪುಟ್ಟನಂಜಮ್ಮ ಅವರ ಮನೆಯಲ್ಲಿ ಮಾ.14 ರಂದು ಕಳ್ಳತನವಾಗಿತ್ತು. ಸುಮಾರು 70 ವರ್ಷ ವಯೋಮಾನದ ವೃದ್ಧೆಯಾಗಿರುವ ಇವರು ಮನೆಯಲ್ಲಿ ಒಬ್ಬರೆ ವಾಸವಿದ್ದರು. ಕಾಲ ಕಳೆಯಲೆಂದು ಪಕ್ಕದ ಮನೆಗೆ ಹೋಗಿದ್ದ ವೇಳೆ ಹಗಲಿನಲ್ಲೇ ಮನೆಯ ಮುಂಬಾಗಿಲಿನಿಂದ ಕಳ್ಳರು ಒಳ ನುಸುಳಿದ್ದರು. ದೇವರ ಮನೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ ಹಾಗೂ 5 ಗ್ರಾಂ ಉಂಗುರ ಮತ್ತು 22 ಸಾವಿರ ಹಣವನ್ನು ದೋಚಿಕೊಂಡು ಛಾವಣಿ ಹೆಂಚು ತೆರೆದು ಪರಾರಿಯಾಗಿದ್ದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವೃದ್ಧೆ ದೂರು ನೀಡಿದ್ದು, ಪಿಎಸ್‌ಐ ಶರವಣ ರೆಡ್ಡಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಭಾನುವಾರ ಮುಖ್ಯ ಪೇದೆ ಶಿವಕುಮಾರ್ ಹಾಗೂ ಮತ್ತೊಬ್ಬ ಪೇದೆಯೊಡನೆ ರಾಗಿಬೊಮ್ಮನಹಳ್ಳಿ ಗ್ರಾಮದ ಪುಟ್ಟ ನಂಜಮ್ಮ ಹಾಗೂ ಅವರ ಪುತ್ರ ನಾಗೇಶ್ ಅವರ ಸಮ್ಮುಖದಲ್ಲಿ ಮನೆಗೆ ಆಗಮಿಸಿ ಮಹಜರು ಪ್ರಕ್ರಿಯೆ ನಡೆಸಿದರು. ಈ ಸದರ್ಭದಲ್ಲಿ ಗ್ರಾಮದ ಯಜಮಾನ ಪುಟ್ಟರಾಜು, ಪರಮೇಶ್ ಇದ್ದರು.