ಜಿಲ್ಲೆ

ಮಲ್ಲಾಪುರ ಗ್ರಾಪಂಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಛತ್ರಪ್ಪ ಚಿನ್ನಪ್ಪ ಲಂಬಾಣಿ ಮತ್ತು ಧಂಜಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ವಾಲ್ಮೀಕಿ ರೇಣುಕಾ ಗಂಗಾಧರ ನಾಮಪತ್ರ ಸಲ್ಲಿಸಿದ್ದರು.

15 ಸದಸ್ಯ ಬಲದಲ್ಲಿ 9 ಸದಸ್ಯರು ಛತ್ರಪ್ಪ ಚಿನ್ನಪ್ಪ ಲಂಬಾಣಿಗೆ ಬೆಂಬಲಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷೆಯಾಗಿ ವಾಲ್ಮೀಕಿ ರೇಣುಕಾ ಗಂಗಾಧರ ಅವಿರೋಧ ಆಯ್ಕೆಯಾದರು.

ಬಿಜೆಪಿ ಹಿರಿಯ ಮುಖಂಡ ಎಚ್.ಸಿ.ಯಾದವ್ ಹಾಗೂ ಬೆಂಬಲಿತ ಸದಸ್ಯರು ವಿಜಯೋತ್ಸವ ಆಚರಿಸಿದರು. ಪ್ರಮುಖರಾದ ಗೌರೀಶ ಬಾಗೋಡಿ, ಪಂಪಾಪತಿ ಗೊಲ್ಲರ, ಯಂಕನಗೌಡ, ಹನುಮರೆಡ್ಡಿ, ಲಕ್ಷ್ಮಣ, ಯರ‌್ರಿಸ್ವಾಮಿ, ಬಸವನಗೌಡ ಪಾಟೀಲ್ ಇತರರಿದ್ದರು.

ಗಂಗಾವತಿಯ ಮಲ್ಲಾಪುರ ಗ್ರಾಪಂ ಅಧ್ಯಕ್ಷರಾಗಿ ಛತ್ರಪ್ಪ ಚಿನ್ನಪ್ಪ ಲಂಬಾಣಿ, ಉಪಾಧ್ಯಕ್ಷೆಯಾಗಿ ವಾಲ್ಮೀಕಿ ರೇಣುಕಾ ಗಂಗಾಧರ ಆಯ್ಕೆಯಾದರು. ಬಿಜೆಪಿ ಹಿರಿಯ ಮುಖಂಡ ಎಚ್.ಸಿ.ಯಾದವ್, ಪ್ರಮುಖರಾದ ಗೌರೀಶ ಬಾಗೋಡಿ, ಪಂಪಾಪತಿ ಗೊಲ್ಲರ್ ಇತರರಿದ್ದರು.