ಲಕ್ಷ್ಮೇಶ್ವರ: ತಾಲೂಕಿನ ದೊಡ್ಡೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಲ್ಲಪ್ಪ ಯಲ್ಲಪ್ಪ ತೋಟದ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಈರಣ್ಣ ಅಂಗಡಿ ಆಯ್ಕೆಯಾದರು.
ಒಟ್ಟು 15 ಸದಸ್ಯರನ್ನೊಳಗೊಂಡ ಗ್ರಾಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ತೋಟದ, ಚಂದ್ರಶೇಖರ ಈಳಗೇರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಅಂಗಡಿ, ದೇವಕ್ಕ ಭಜಕ್ಕನವರ ನಾಮಪತ್ರ ಸಲ್ಲಿಸಿದ್ದರು.
ಮತದಾನ ಪ್ರಕ್ರಿಯೆಯಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರಿಂದ 7 ಸದಸ್ಯರ ಬಲದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ಬಿ.ಎಸ್. ಭಜಂತ್ರಿ ಚುನಾವಣಾಧಿಕಾರಿಯಾಗಿದ್ದರು. ಗ್ರಾಪಂ ಸದಸ್ಯರಾದ ನಾನಪ್ಪ ಲಮಾಣಿ, ನಿಂಗಪ್ಪ ಬಂಕಾಪುರ, ಫಕೀರಗೌಡ್ರ ಭರಮಗೌಡ್ರ, ಲಕ್ಷ್ಮೀ ಅಂಗಡಿ, ನೀಲವ್ವ ಕಟಗಿ, ಸುಶೀಲವ್ವ ಲಮಾಣಿ, ಸಕ್ರಪ್ಪ ಲಮಾಣಿ, ಮಾಂತೇಶ ಲಮಾಣಿ, ಸಾಕವ್ವ ಲಮಾಣಿ, ಜಯಮ್ಮ ಮಣ್ಣಮ್ಮನವರ, ದೇವಕ್ಕ ಭಜಕ್ಕನವರ ಇಂದ್ರವ್ವ ಲಮಾಣಿ, ಮಾಲವ್ವ ಈಳಗೇರ ಇತರರಿದ್ದರು.