ಜಿಲ್ಲೆ

ಮಲ್ಲಮ್ಮನ ಬೆಳವಡಿ, ದೊಡವಾಡ ಶಾಲೆಗೆ ತಾಪಂ ಇಒ ಭೇಟಿ

ಬೈಲಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಹಾಗೂ ದೊಡವಾಡ ಶೈಣಿಕ ಕ್ಲಸ್ಟರ್​ನ ವಿವಿಧ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ತಾಪಂ ಇಒ ಸಂಜೀವ ಜುನ್ನೂರ ನೇತೃತ್ವದ ತಂಡ ಶುಕ್ರವಾರ ಭೇಡಿ ನೀಡಿತು. ಶುದ್ಧ ಕುಡಿಯುವ ನೀರು, ಬಾಲಕ&ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹ, ಸುಸಜ್ಜಿತ ಕೊಠಡಿ, ಮೈದಾನ, ಮಧ್ಯಾಹ್ನ ಬಿಸಿಯೂಟದ ಸಿದ್ಧತೆ ಸೇರಿ ಅಗತ್ಯ ಸೌಕರ್ಯಗಳನ್ನು ಪರಿಶೀಲಿಸಿದರು. ತಾಪಂ ಇಒ ಸಂಜೀವ ಜುನ್ನೂರ ಮಾತನಾಡಿ, ಎಸ್ಸೆಸ್ಸೆಲ್ಸಿ ಮಕ್ಕಳ ಲಿತಾಂಶ ಸುಧಾರಣೆಗೆ ಶಿಕರು ವಿಶೇಷ ತರಗತಿ ನಡೆಸಿ ಮಕ್ಕಳಲ್ಲಿನ ಪರೀೆ ಭಯ ಹೋಗಲಾಡಿಸುವ ಮೂಲಕ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಬಿಇಒ ಎ.ಎನ್​.ಪ್ಯಾಟಿ, ಎಂ.ಪಿ.ಯರಗಟ್ಟಿ, ಪಿಆರ್​ಡಿಪಿ ಅಧಿಕಾರಿ ಸುನೀಲ ಹೊಂಗಲ, ಬಿಆರ್​ಪಿ ರಾಜು ಹಕ್ಕಿ, ಮುಖ್ಯಶಿಕಿ ಬಿ.ಆರ್​.ಹುತಮಲ್ಲನವರ ಇತರರಿದ್ದರು.