ಜಿಲ್ಲೆ

ಮಲ್ಲಕಂಬ ರಾಷ್ಟ್ರೀಯ ಕ್ರೀಡಾಕೂಟ ತಂಡಕ್ಕೆ ಆಯ್ಕೆ ಇಂದು

Gadag

ಲಕ್ಷ್ಮೇಶ್ವರ: ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರ ವರೆಗೆ ಗುಜರಾತನಲ್ಲಿ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಲ್ಲಕಂಬ ಕ್ರೀಡೆ ಸೇರ್ಪಡೆ ಮಾಡಲಾಗಿದೆ. ಈ ಹಿನ್ನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಲ್ಲಕಂಬ ಕ್ರೀಡಾ ತಂಡದ ಆಯ್ಕೆ ಪ್ರಕ್ರಿಯೆಯು ಆ. 12ರಂದು ಲಕ್ಷ್ಮೇಶ್ವರದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ಈ ಆಯ್ಕೆಯಲ್ಲಿ 16 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರೂಪ್ ಮತ್ತು ಸ್ಥಿರ ಮಲ್ಲಕಂಬ ಎರಡು ವಿಭಾಗಗಳಲ್ಲಿ ಆಯ್ಕೆ ಮಾಡಲಾಗುವುದು . ಅದರಂತೆ 18 ವರ್ಷದ ಪುರುಷರಿಗೆ ಸ್ಥಿರ ಮಲ್ಲಕಂಬ, ನೇತಾಡುವ ಮಲ್ಲಕಂಬ ಮತ್ತು ರೂಪ್​ಗಳಲ್ಲಿ ಆಯ್ಕೆ ಮಾಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಆಟಗಾರರು ಅರ್ಹ ದಾಖಲೆಗಳೊಂದಿಗೆ ಆ. 12ರಂದು ಬೆಳಗ್ಗೆ 9.30ಕ್ಕೆ ಕಾಲೇಜ್​ನ ಮೈದಾನದಲ್ಲಿ ಹಾಜರಿರಬೇಕು ಎಂದು ಕರ್ನಾಟಕ ಅಮ್ಯೆಚೂರ್ ಮಲ್ಲಕಂಬ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪೊ›. ಎಸ್.ಎಫ್. ಕೊಡ್ಲಿ ತಿಳಿಸಿದ್ದಾರೆ.