ಚಿತ್ರದುರ್ಗ: ಸಾಧನೆಗೆ ಹಸಿವು ಅಡ್ಡಿಯಾಗಬಾರದೆಂದು ಚಿತ್ರದುರ್ಗ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ರಂಗಪ್ಪ ಹೇಳಿದರು.
ಮಹಾಲಯ ಅಮವಾಸ್ಯೆ ಪ್ರಯುಕ್ತ ನಗರದ ಮೆದೇ ಹಳ್ಳಿ ರಸ್ತೆ ಮಾರುತಿ ನಗರದ ಮಲ್ಲಾಡಿಹಳ್ಳಿ ಯೋಗ ಧ್ಯಾನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಅಗ್ನಿಹೋತ್ರ ಹೋಮ ಹಾಗೂ ಪ್ರಶಸ್ತಿ ಪ್ರಧಾನ ಕಾರ‌್ಯಕ್ರಮದಲ್ಲಿ ಮಾತನಾಡಿ,ದೇಶದ ಪ್ರಗತಿಗೆ ಎಲ್ಲರಿಗೂ ಉಚಿತವಾಗಿ ಅನ್ನ,ಆರೋಗ್ಯ,ಶಿಕ್ಷಣ ದೊರೆಯಬೇಕಿದೆ.
ಯೋಗ ಕ್ಷೇತ್ರದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಅವರ ಸಾಧನೆ ಸ್ಮರಣೀಯವೆಂದರು. ಬೆಂಗಳೂರಿನ ದೀರ್ಘಾಯು ಯೋಗ ಸಂಸ್ಥೆ ಯ ಯೋಗಾಚಾರ್ಯ ಡಿ.ಗಣೇಶ್ ಮಾತನಾಡಿದರು. ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಅಗ್ನಿಹೋತ್ರ ಹೋಮ ನೆರವೇರಿಸಿ ಅದರ ಮಹತ್ವವನ್ನು ತಿಳಿಸಿಕೊಟ್ಟರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಾಧಕ ಪ್ರಸಾದ್,ಶ್ರೀನಿವಾಸ್,ಯೋಗ ಶಿಕ್ಷಕರಾದ ಗೀತಾ, ಸುರೇಖಾ,ಶರಣಪ್ಪ, ನಾಗರಾಜ್,ರಮೇಶ್ ಇತರರು ಇದ್ದರು.
--