ಬಂಗಾರಪೇಟೆ: ಪುತ್ರನ ಒಡೆತನದಲ್ಲಿರುವ ಸನ್ಮಾರ್ಗ ಸಂಸ್ಥೆಗೆ ಕಳಂಕ ತರಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿ ಬಳಿ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಹಲವು ಯೂಟ್ಯೂಬರ್‌ಗಳು
ದುರುದ್ದೇಶಪೂರಿತವಾಗಿ ಸನ್ಮಾರ್ಗ ಹೆಸರಿನ ಕಟ್ಟಡ ತೋರಿಸಿ ಕಳಂಕ ತರಲು ಯತ್ನಿಸಿದ್ದಾರೆ. ಅಕ್ರಮವಾಗಿ ಕಟ್ಟಡಕ್ಕೆ ಪ್ರವೇಶ ವಾಡಿ ಚಿತ್ರೀಕರಿಸಿ ತೇಜೋವಧೆ ವಾಡುತ್ತಿದ್ದಾರೆ. ಜಮೀನು ವಿವಾದದ ಹೆಸರಿನಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಯುತ್ತಿದ್ದು, ಅಂತಹವರ ವಿರುದ್ಧ ವಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಇದೆಲ್ಲವೂ ಬಿಜೆಪಿಯ ಕುತಂತ್ರವಾಗಿದೆ. ಧೈರ್ಯ ಇದ್ದಲ್ಲಿ ನೇರವಾಗಿ ಬಂದು ಟೀಕಿಸಲಿ ಎಂದು ತಾಕೀತು ವಾಡಿದರು.
ತಾಲೂಕಿನ ಅನಿಗಾನಹಳ್ಳಿ ಸ.ನಂ.37/1ರಿಂದ 5ವರೆಗೆ 2 ಎಕರೆ 37 ಗುಂಟೆ ಜಮೀನಿದ್ದು, ಸದರಿ ಜಮೀನನ್ನು ಚಂದ್ರು ಎಂಬುವರಿಂದ ಶುದ್ಧ ಕ್ರಯ ವಾಡಿಸಿಕೊಳ್ಳಲಾಗಿದೆ. ಆ ಜಮೀನನ್ನು ವಸತಿ ಪ್ರದೇಶದಿಂದ ವಾಣಿಜ್ಯ ಉಪಯೋಗಕ್ಕೆ ಬದಲಾಯಿಸಿ 3 ವರ್ಷದಿಂದ ಆಸ್ಪತ್ರೆ ಮತ್ತು ಸೂಪರ್ ವಾರ್ಕೆಟ್ ನಿರ್ವಾಣ ಕೆಲಸ ಮಾಡಿಸುತ್ತಿದ್ದೇವೆ. ಈ ಮಧ್ಯೆ ರೌಡಿಶೀಟರ್ ಒಬ್ಬರ ನೇತೃತ್ವದಲ್ಲಿ ಕೆಲವರು ಬೆಂಗಳೂರಿನಿಂದ ರೌಡಿಗಳನ್ನು ಕರೆತಂದು ಖರೀದಿಸಿರುವ ಸದರಿ ಜಮೀನಿಗೆ ನುಗ್ಗಿ ಅಕ್ರಮ ಪ್ರವೇಶ ವಾಡಿ ದಾಂಧಲೆ ವಾಡಿದ್ದಾರೆ ಎಂದು ಆರೋಪಿಸಿದರು.