ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ತ್ರಿಶಲಾಮಾತಾ ಮಹಿಳಾ ಮಂಡಳದ ಆಶ್ರಯದಲ್ಲಿ ಸೆ.8ರಿಂದ ದಶಲಕ್ಷಣ ಮಹಾಪರ್ವ ಆರಂಭಗೊಳ್ಳಲಿದೆ. ಅಮ್ಮಿನಬಾವಿಯ ಶ್ರೀನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ನಿತ್ಯ ಸಂಜೆ 7 ಗಂಟೆಗೆ ಉಪನ್ಯಾಸಗಳು ನಡೆಯಲಿವೆ.
ಸೆ. 8ರಂದು ಉತ್ತಮ ಕ್ಷಮಾ ಧರ್ಮದ ಕುರಿತು ಲೇಖಕ ಗುರುಮೂರ್ತಿ ಯರಂಬಳಿಮಠ, ಸೆ. 9ರಂದು ಉತ್ತಮ ಮಾರ್ಧವ ಧರ್ಮ ಕುರಿತು ಭಾಗ್ಯಶ್ರೀ ಅರುಣ ನವಲೂರ, ಸೆ. 10ರಂದು ಉತ್ತಮ ಆರ್ಜವ ಧರ್ಮ ಕುರಿತು ಸಂತೋಷ ಸಣ್ಣಮ್ಮನವರ, ಸೆ.11 ರಂದು ಉತ್ತಮ ಶೌಚ ಧರ್ಮ ಕುರಿತು ತನುಜಾ ರೋಖಡೆ, ಸೆ. 12ರಂದು ಉತ್ತಮ ಸತ್ಯಧರ್ಮ ಕುರಿತು ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಹಟ್ಟಿಯವರ ಉಪನ್ಯಾಸ ನೀಡುವರು.
ಸೆ. 13ರಂದು ಉತ್ತಮ ಸಂಯಮ ಧರ್ಮ ಕುರಿತು ಮಂಜುನಾಥ ಅಣ್ಣಿಗೇರಿ, ಸೆ. 14ರಂದು ಉತ್ತಮ ತಪ ಧರ್ಮ ಕುರಿತು ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎನ್. ಬಾವಿ, ಸೆ. 15ರಂದು ಉತ್ತಮ ತ್ಯಾಗ ಧರ್ಮ ಕುರಿತು ಮಂಜುನಾಥ ಹೆಬಸೂರ, ಸೆ.16 ಉತ್ತಮ ಆಕಿಂಚನ್ಯ ಧರ್ಮ ಕುರಿತು ಸುರೇಖಾ ಬಾವಿ, ಸೆ.17 ರಂದು ಉತ್ತಮ ಬ್ರಹ್ಮಚರ್ಯ ಧರ್ಮ ಕುರಿತು ರಾಜಯೋಗಿನಿ ಬ್ರಹ್ಮಕುಮಾರಿ ಉಪನ್ಯಾಸ ನೀಡುವರು.
ಸೆ.18 ರಂದು ಕ್ಷಮಾವಳಿ ಜತೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವರೂರ ಜೈನ್ಮಠದ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಿವಲೀಲಾ ವಿನಯ ಕುಲಕರ್ಣಿ, ಮಾಜಿ ಶಾಸಕ ಅಮೃತ ದೇಸಾಯಿ, ತಹಸೀಲ್ದಾರ ಡಾ. ದೊಡ್ಡಪ್ಪ ಹೂಗಾರ, ಜೈನ್ ಸಮಾಜದ ಹಿರಿಯರಾದ ಬಿ.ಬಿ. ದೇಸಾಯಿ, ಪಿ.ಎಸ್. ಪತ್ರಾವಳಿ, ಸುರೇಂದ್ರ ದೇಸಾಯಿ, ಶಶಿಕಲಾ ದೇಸಾಯಿ, ಚಂದ್ರಕಾಂತ ನವಲೂರ, ಮಹಾವೀರ ದೇಸಾಯಿ, ಈಶ್ವರ ಗಡೇಕಾರ, ಧರೆಪ್ಪ ಧಾರವಾಡ, ಅಜಿತ ದೇಸಾಯಿ, ಬ್ರಹ್ಮಕುಮಾರ ದೇಸಾಯಿ, ದೀಪಕ ದೇಸಾಯಿ, ನೇಮಣ್ಣ ಧಾರವಾಡ, ವಾಸು ದೇಸಾಯಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಶ್ರೀ ನೇಮಿನಾಥ ದಿಗಂಬರ ಜೈನ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ತಿಳಿಸಿದ್ದಾರೆ.