ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ವಿಷ್ಣು, ಕೆಂಪಸಾಬಣ್ಣವರ, ಗುಡುಸಾಬ, ಶಂಕರಗೌಡ, ಕರೀಮಸಾಬ ಇತರರು ಇದ್ದರು. 
ಜಿಲ್ಲೆ

ಮಲಿಯಮ್ಮ-ದುರ್ಗಾದೇವಿ ಜಾತ್ರೆ 22ರಿಂದ

Kopala - Desk - Eraveni

ಅಳವಂಡಿ: ಸಮೀಪದ ಕೂಡಗ್ರಾಮದ ಶ್ರೀ ಮಲಿಯಮ್ಮ ಹಾಗೂ ದುರ್ಗಾದೇವಿ ಜಾತ್ರೆಯನ್ನು ಅ.22 ಹಾಗೂ 23ರಂದು ಅದ್ದೂರಿಯಾಗಿ ಆಚರಿಸಲು ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಗ್ರಾಪಂ ಸದಸ್ಯ ವಿಷ್ಣು ಹಾಳಕೇರಿ ತಿಳಿಸಿದರು.

ಸಮೀಪದ ಬೆಳಗಟ್ಟಿ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಜಾತ್ರೆಯನ್ನು ವೈಭವದಿಂದ ಆಚರಿಸಲಾಗುವುದು. ದೇವಸ್ಥಾನವನ್ನು ತಳಿರು, ತೋರಣ, ವಿದ್ಯುತ್ ದೀಪದಿಂದ ಅಲಂಕರಿಸಲಾಗುವುದು. ದೇವಿಯರಿಗೆ ವಿಶೇಷ ಪೂಜೆ ಪುನಸ್ಕಾರಗಳು, ಅಡ್ಡಪಲ್ಲಕ್ಕಿ ಮೆರವಣಿಗೆ. ಅನ್ನ ದಾಸೋಹ ಇತರ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಪ್ರಮುಖರಾದ ಕೆಂಪಸಾಬಣ್ಣವರ, ಗುಡುಸಾಬ ಅಡವಿಸೋಂಪುರ, ಶಂಕರಗೌಡ ಪಾಟೀಲ, ಕರೀಮಸಾಬ, ಹನುಮಪ್ಪ ತಳವಾರ, ಮುಸ್ತುಸಾಬ, ಖಾದರಸಾಬ, ಮೋದಿನಸಾಬ, ನಿಂಗಪ್ಪ, ಗುಡದಪ್ಪ, ಕೋಟೆಪ್ಪ, ದೇವೆಂದ್ರಗೌಡ, ಕನಕನಗೌಡ, ಶಿವನಗೌಡ, ಖಾದರ್‌ಸಾಬ, ಸುನೀಲಪ್ಪ, ರಾಮಣ್ಣ, ಕನಕಪ್ಪ, ಸುಭಾಸಗೌಡ, ಪಕೀರಗೌಡ, ಮಲ್ಲಪ್ಪ, ಜಂಗ್ಲಿಸಾಬ, ಮೈಲಾರಪ್ಪ, ಬಸನಗೌಡ ಇತರರಿದ್ದರು.