ಜಿಲ್ಲೆ

ಮಲೆನಾಡು ಸಿರಿ ಶಿಕ್ಷಕ ಪ್ರಶಸ್ತಿ ಪ್ರದಾನ

ಸೌಮ್ಯ ಆರ್

ಸುಳ್ಯ: ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡುವ ಮಲೆನಾಡು ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯ ಗಾಂಧಿನಗರದಲ್ಲಿ ನಡೆಯಿತು.

ಸುಳ್ಯ ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕೆ.ಆರ್., ಪೆರುವಾಜೆ ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶ್ರುತಿ, ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಜ್ಞಾನ ಶಿಕ್ಷಕ ಇಕ್ಬಾಲ್, ರೋಟರಿ ಶಾಲಾ ಶಿಕ್ಷಕ ಹರ್ಷಿತ್ ದಾತಡ್ಕ, ಗ್ರೀನ್ ವ್ಯೆ ಪ್ರೌಢಶಾಲಾ ಶಿಕ್ಷಕಿ ಜಯಂತಿ ಅವರಿಗೆ ಮಲೆನಾಡು ಸಿರಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಂಜುಳಾ, ತಾಪಂ ಇ.ಒ. ರಾಜಣ್ಣ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ., ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರ, ಮಾಜಿ ನ.ಪಂ.ಅಧ್ಯಕ್ಷ ಎಸ್.ಸಂಶುದ್ದೀನ್, ದ.ಕ. ಜಿಲ್ಲಾ ಜೇನು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್, ಪ್ರಭಾಕರನ್ ನಾಯರ್, ಇಕ್ಬಾಲ್ ಎಲಿಮಲೆ, ದೀಪಕ್ ಕುತ್ತಮೊಟ್ಟೆ, ಉಮ್ಮರ್ ಹಾಜಿ, ಲಿಂಗಪ್ಪ ಗೌಡ ಕೇರ್ಪಳ, ಅಶೋಕ್ ಪ್ರಭು, ಡಾ.ನಿತಿನ್ ಪ್ರಭು, ಮಧುಸೂದನ್ ಕುಂಭಕೋಡು, ಲತಾ ಮಧುಸೂದನ್, ಹರಿರಾಯ ಕಾಮತ್, ಡಾ.ಕೆ.ಜಿ.ಪುರುಷೋತ್ತಮ, ಪ್ರೊ.ಯೂಸುಫ್, ಆದಂ ಹಾಜಿ ಕವ್ಮಾಡಿ, ಕಟ್ಟೆಕಾರ್ ಅಬ್ದುಲ್ಲಾ, ದಯಾನಂದ ಆಳ್ವ, ಜಿತೇಂದ್ರ ನಿಡ್ಯಮಲೆ, ಸುಮನಾ ಬೆಳ್ಳಾರ್ಕರ್, ಸುಪ್ರೀತ್ ಮೋಂಟಡ್ಕ, ಎ.ಪಿ.ಎಂ.ಸಿಯ. ಮುದ್ದುಕೃಷ್ಣ, ಸಿ.ಎಚ್.ಪ್ರಭಾಕರ ನಾಯರ್, ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಜಲಜಾಕ್ಷಿ, ಗಣೇಶ್ ಆಳ್ವ, ಪಿ.ಎ.ಮಹಮ್ಮದ್, ಎಸ್.ವಿ.ಪ್ರಸಾದ್, ಶ್ರೀಹರಿ ಪೈಂದೋಡಿ, ಉಮ್ಮರ್ ಕಟ್ಟೆಕಾರ್, ಕೆ.ಎಂ.ಮುಹಿಯುದ್ದೀನ್, ದಿನೇಶ್ ಕೋಲ್ಚಾರ್, ಎ.ಅಬ್ದುಲ್ಲ, ಧನಲಕ್ಷ್ಮೀ ಕುದ್ಪಾಜೆ, ಚಂದ್ರಶೇಖರ್ ಮಾಸ್ತರ್, ಅಬ್ದುಲ್ ಹಮೀದ್ ಜನತಾ, ಶಾಫಿ ಕುತ್ತಮೊಟ್ಟೆ, ಡಾ.ಎನ್.ಎ.ಜ್ಞಾನೇಶ್, ಕೆ.ಪಿ.ಎಸ್.ಮಹಮ್ಮದ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಹರೀಶ್ ಬಂಟ್ವಾಳ್, ಮಲೆನಾಡು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ಮೊದಲಾದವರಿದ್ದರು.