ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಹಿಂದು ಮಹಾಗಣಪತಿ ಸಮಿತಿ ಪ್ರತಿಷ್ಠಾಪಿಸಿರುವ 3ನೇ ವರ್ಷದ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಶನಿವಾರ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಯರೇಚಿಕ್ಕನಹಳ್ಳಿ ಅಶೋಕ್ ತಿಳಿಸಿದ್ದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10ಕ್ಕೆ ಪೂಜೆ ಸಲ್ಲಿಸುವ ಮೂಲಕ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಶಿವಮೊಗ್ಗ ಹರಿಹರ ಮುಖ್ಯ ರಸ್ತೆ, ಸಂತೆ ರಸ್ತೆ, ಬಸವೇಶ್ವರ ಬಡಾವಣೆ, ಬನ್ನಿ ಮಹಾಕಾಳಿ ಮಂಟಪ, ನಂದಿಗುಡಿ ರಸ್ತೆ, ಪೇಟೆ ಬೀದಿ, ಕಲ್ಲೇಶ್ವರ ಬಡಾವಣೆ, ಕಾಲಭೈರವ ರಸ್ತೆ, ಶಂಕರ ಮಂದಿರ ರಸ್ತೆ, ಏಕನಾಥೇಶ್ವರಿ ದೇವಸ್ಥಾನದ ರಸ್ತೆ, ಜ್ಯೋತಿ ಟಾಕೀಸ್ ರಸ್ತೆ ಮತ್ತಿತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭದ್ರಾ ಚಾನಲ್‌ನಲ್ಲಿ ವಿಸರ್ಜನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಮಿತಿಯ ಖಜಾಂಚಿ ಪೂಜಾರ್ ರಾಜು ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜಿಪಂ ಮಾಜಿ ಸದಸ್ಯ ವಾಗೀಶಸ್ವಾಮಿ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಮೇದಾರ್ ರವಿ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ನಾಸಿಕ್ ಡೋಲ್, ತಮಟೆ, ಡೊಳ್ಳು, ಕಲಾ ಮೇಳಗಳು, ಈಶ್ವರ, ಶ್ರೀರಾಮ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ. 15 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಕ್ತರಿಗೆ ಪ್ರಸಾದ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಗಣೇಶ ಸಮಿತಿಯ ಸದಸ್ಯರಾದ ಪುರಸಭೆ ಸದಸ್ಯ ಮಂಜುನಾಥ್, ಡಿ.ಎಂ. ಲಿಂಗರಾಜ, ಎಕೆಗೊಂದಿ ಕರಿಯಪ್ಪ, ಕಡ್ಲೆಗೊಂದಿ ಕೇಶವ, ಹೊಸಳ್ಳಿ ಕರಿಬಸಣ್ಣ, ಬಟ್ಟೆ ಅಂಗಡಿ ವಿಶ್ವನಾಥ್, ಎ.ಕೆ.ಲೋಕೇಶ್, ನಾಗರಾಜ್, ಆಕಾಶ, ಜಿಗಳಿ ಹನುಮಗೌಡ, ಕೋಮರನಹಳ್ಳಿ ಬಸವರಾಜ್, ಸುನಿಲ್, ಹರಳಹಳ್ಳಿ ಶ್ರೀನಿವಾಸ್, ಮಲ್ಲನಾಯಕನಹಳ್ಳಿ ಶೇಖಣ್ಣ ಇತರರು ಇದ್ದರು.