ಜಿಲ್ಲೆ

ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

ಮಲೇಬೆನ್ನೂರು: ಸಮೀಪದ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಚೈತ್ರ ಶುದ್ಧ ‘ದವನ ಪೂರ್ಣಿಮಾ ಬ್ರಹ್ಮ ರಥೋತ್ಸವ’ ಮಂಗಳವಾರ ವೈಭವದಿಂದ ನೆರವೇರಿತು.

ಗಣೇಶಪೂಜೆ, ಪುಣ್ಯಾಹವಾಚನ, ರಥಶಾಂತಿ, ವಿಶೇಷ ಶ್ರೀಚಕ್ರ ಪೂಜೆ, ಹೋಮ ಹವನ ನಡೆಯಿತು.

ಉತ್ಸವಮೂರ್ತಿ ರಥಾರೋಹಣದ ನಂತರ ಮಹಾಮಂಗಳಾರತಿ ನೆರವೇರಿತು. ಭಕ್ತರು ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ ‘ಹರಹರ ಮಹಾದೇವ’, ’ಲಕ್ಷ್ಮೀ ರಮಣ, ರಮಾರಮಣ, ಇಂದಿರಾ ರಮಣ ಗೋವಿಂದ’ ಘೋಷದೊಂದಿಗೆ ತೇರು ಎಳೆದರು.

ಮಂಗಳವಾದ್ಯ, ಡೊಳ್ಳು, ತಮಟೆ ಹಾಗೂ ಜಾಂಜ್ ಮೇಳ, ಆರ್ಚಕವೃಂದ, ವಿಪ್ರ ಸಮೂಹದ ವೇದಘೋಷ ಉತ್ಸವಕ್ಕೆ ಮೆರುಗು ತಂದವು.

ಕಲ್ಯಾಣೋತ್ಸವ: ಶ್ರೀದೇವಿ ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ಸಾಂಪ್ರದಾಯಿಕವಾಗಿ ಜರುಗಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಅರ್ಚಕರಾದ ಗುರುರಾಜಾಚಾರ್, ಮಂಜುನಾಥಾಚಾರ್, ಅಮರನಾಥ ಜೋಯ್ಸ, ಮುಜರಾಯಿ ಶಾನುಭೋಗ ಧರ್ಮರಾವ್, ದೇವಾಲಯದ ಆಡಳಿತಾಧಿಕಾರಿ ಆರ್. ರವಿ, ಮುಖಂಡರಾದ ಐರಣಿ ಅಣ್ಣೇಶ್, ಮಂಜುನಾಥ್ ಪಟೇಲ್ ಇದ್ದರು.