ಕೊಮಾರನಹಳ್ಳಿಯ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಕೆರೆಗೆ ಭೇಟಿ ನೀಡಿ ತಹಸೀಲ್ದಾರ್ ಡಾ.ಎಂ.ವಿ.ಅಶ್ವತ್ಥ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಉಪತಹಸೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ವಿ.ಕುಮಾರ್, ಕೊಟ್ರೇಶ್, ಪ್ರದೀಪ್ ಪಿಎಸ್‌ಐ ರವಿಕುಮಾರ್ ಇದ್ದರು. 
ಜಿಲ್ಲೆ

ಕೆರೆ ದಡದ ಮೇಲಿನ ಅಂಗಡಿಗಳ ತೆರವಿಗೆ ತಹಸೀಲ್ದಾರ್ ಖಡಕ್ ವಾರ್ನಿಂಗ್

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯ ಹೆಳವಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಕೆರೆ ದಡದ ಮೇಲೆ ಅಕ್ರಮವಾಗಿ ನಿರ್ಮಿಸಿರುವ ಶೆಡ್ ಹಾಗೂ ಗೂಡಂಗಡಿಗಳನ್ನು 2 ದಿನಗಳೊಳಗೆ ತೆರವು ಮಾಡುವಂತೆ ತಹಸೀಲ್ದಾರ್ ಡಾ.ಎಂ.ವಿ.ಅಶ್ವತ್ಥ್ ಗುರುವಾರ ತಾಕೀತು ಮಾಡಿದರು.

ಅಂಗಡಿಗಳ ತೆರವಿಗೆ ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಯಾರೊಬ್ಬರೂ ಪಾಲಿಸಿರಲಿಲ್ಲ. ಕೂಡಲೇ ಎಚ್ಚರ ವಹಿಸದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಲಾವಕಾಶ ನೀಡುವಂತೆ ಅಂಗಡಿಗಳ ಮಾಲೀಕರು ಮನವಿ ಮಾಡಿದರು. ಅದಕ್ಕೆ ತಹಸೀಲ್ದಾರ್ ಒಪ್ಪಲಿಲ್ಲ. ಕೆರೆದಂಡೆಯ ಇಕ್ಕೆಲಗಳ ಮೇಲೆ ಯಾವುದೇ ಕಟ್ಟಡ ಅಥವಾ ಅಂಗಡಿಗಳಿಗೆ ಅವಕಾಶವಿಲ್ಲ. ದೇಗುಲದ ಸುತ್ತಮುತ್ತ ಬಿಯರ್ ಬಾಟಲಿ , ಗುಟ್ಕಾ ಚೀಟಿ , ಟೀ ಕಪ್ ಸೇರಿ ಇತರೆ ತ್ಯಾಜ್ಯ ವಸ್ತುಗಳು ಬೀಳುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ದೊಡ್ಡ ವಾಹನಗಳ ಸಂಚಾರದಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿದ್ದು, ಅದಕ್ಕೂ ನಿಷೇಧ ಹಾಕಲಾಗಿದೆ ಎಂದರು. ಉಪತಹಸೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ವಿ .ಕುಮಾರ್, ಕೊಟ್ರೇಶ್, ಪ್ರದೀಪ್, ಪಿಎಸ್‌ಐ ರವಿಕುಮಾರ್ ಇದ್ದರು.