filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0000,0.0000; brp_del_sen:0.0000,0.0000; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಮಕ್ಕಳ ಶೈಕ್ಷಣಿಕ ಸಾಧನೆಗೆ ಒತ್ತು ನೀಡಿ

ಮಳವಳ್ಳಿ: ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡಿರುವ ಹಾಲು ಉತ್ಪಾದಕ ಕೃಷಿಕರು ತಮ್ಮ ಮಕ್ಕಳು ಶೈಕ್ಷಣಿಕ
ಸಾಧನೆಗೆ ಒತ್ತು ನೀಡಬೇಕು ಎಂದು ಬಿ.ಜಿ. ಪುರ ಡೇರಿ ಅಧ್ಯಕ್ಷ ಬಿ.ಎಸ್. ಮಹೇಶ್ ತಿಳಿಸಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರ ಸಂಘಗಳೇ ಬೆನ್ನೆಲುಬಾಗಿದೆ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಹೈನೋದ್ಯಮದಲ್ಲಿ ಬಹಳಷ್ಟು ರೈತರು ತೊಡಗಿಸಿಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಶಕ್ತಿ ತುಂಬಿದ್ದಾರೆ. ಕೌಟುಂಬಿಕ ಬದುಕಿನ ಆರ್ಥಿಕ ಮಟ್ಟವನ್ನೂ ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸಂಘದ ಆಡಳಿತ ಮಂಡಳಿಯಿಂದ ಉತ್ಪಾದಕರ ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ಸಂಘದ ವತಿಯಿಂದ ಗೌರವಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕಾರ್ಯದರ್ಶಿ ಮಹೇಶ್ ವಾರ್ಷಿಕ ವರದಿ ಮಂಡಿಸಿದರು. ಸಂಘವು ನಿವ್ವಳ 12,96,482 ರೂ. ಲಾಭ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಿದ್ದ ಬಸವಣ್ಣ (ಪ್ರಥಮ), ಪುಷ್ಪ ಮುದ್ದಣ್ಣ(ದ್ವಿತಿಯ), ನಂಜುಂಡಸ್ವಾಮಿ (ತೃತೀಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಉತ್ಪಾದಕರ ಮಕ್ಕಳಿಗೆ ಗೌರವಧನ ನೀಡಿ ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ರಾಜಪ್ಪ, ನಿರ್ದೇಶಕರಾದ ಬಿ.ಎಂ.ನಾಗರಾಜು, ನಾಗೇಶ್, ಬಿ.ವೀರಸ್ವಾಮಿ, ಶಿವಮೂರ್ತಿ, ಸಿದ್ದರಾಜು, ಲಿಂಗರಾಜು, ಕೆಂಪಮ್ಮಣ್ಣಿ, ಶಶಿಕಲಾ, ಮರಿಸ್ವಾಮಿ, ಮಹದೇವಸ್ವಾಮಿ ಇತರರು ಇದ್ದರು.