ಚಿಕ್ಕಮಗಳೂರು ತಾಲೂಕು ದಾಸರಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಲಾಶ್ರೀ ಅವರನ್ನು ಸಹಸದಸ್ಯರು ಅಭಿನಂದಿಸಿದರು. 
ಜಿಲ್ಲೆ

ದಾಸರಹಳ್ಳಿ ಗ್ರಾಪಂ ಉಪಾಧ್ಯಕ್ಷೆಯಾಗಿ ಮಾಲಾಶ್ರೀ ಅವಿರೋಧ ಆಯ್ಕೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಕೆ.ಎಲ್.ಮಾಲಾಶ್ರೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರತೀಶ್ ಘೋಷಣೆ ಮಾಡಿದರು. ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಾಲಾಶ್ರೀ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಶಿವೇಗೌಡ, ಕಳೆದ ೨೦ ವರ್ಷಗಳಿಂದ ಈ ಗ್ರಾಮ ಪಂಚಾಯಿತಿ ಬಿಜೆಪಿ ಭದ್ರಕೋಟೆಯಾಗಿದೆ. ಮಾಜಿ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಅಭಿವೃದ್ಧಿಯಾಗಿದೆ. ಈ ಅಭಿವೃದ್ಧಿ ಕಾರ್ಯವನ್ನುಮುಂದುವರಿಸಿಕೊAಡು ಹೋಗುವಂತೆ ತಿಳಿಸಿದರು.
ಬಡವರು, ದೀನದಲಿತರು, ಕೂಲಿ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುವ ರೀತಿ ಕೆಲಸ ಮಾಡಬೇಕು. ದಸರಹಳ್ಳಿಯನ್ನು ಮಾದರಿ ಗ್ರಾಪಂ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಗ್ರಾಪಂ ಒಂದು ದೇವಾಲಯ ಎಂಬ ಮನೋಭಾವದಿಂದ ಸೇವೆ ಸಲ್ಲಿಸಬೇಕು ಎಂದರು.
ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮಾಲಾಶ್ರೀ ಮಾತನಾಡಿ, ದಾಸರಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ಸದಸ್ಯರ ಸಹಕಾರ, ವಿಶ್ವಾಸ ಪಡೆದುಕೊಂಡು ಬದ್ಧವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅರಳಗುಪ್ಪೆ ಕೈಮರ ಸೊಸೈಟಿ ಅಧ್ಯಕ್ಷ ಸತೀಶ್, ಸದಸ್ಯೆ ಶ್ರುತಿ ಕೌಶಿಕ್, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಲಲಿತಾ ವಿನೋದ್, ಅವಿಲಾ, ಬಿಜೆಪಿ ಬೂತ್ ಅಧ್ಯಕ್ಷ ಚಂದ್ರಶೇಖರ್, ಕೌಶಿಕ್, ಆದರ್ಶ್ಕುಮಾರ್ ಉಪಸ್ಥಿತರಿದ್ದರು.