ವಿಜಯವಾಣಿ ಸುದ್ದಿಜಾಲ ಎಂ.ಕೆ.ಹುಬ್ಬಳ್ಳಿ
ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶೇ.49.45 ಮತದಾನವಾಗಿದ್ದು, ಶಾಂತಿಯುತವಾಗಿ ಜರುಗಿತು.
ಸಂಜೆ 5.30ಕ್ಕೆ ಮತದಾನ ಪೂರ್ಣಗೊಂಡಿತು. 15 ನಿರ್ದೇಶಕ ಸ್ಥಾನಗಳಿಗೆ ಒಟ್ಟು 44 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. 34 ಮತಗಟ್ಟೆಗಳ 16,903 ಮತದಾರರಲ್ಲಿ 8,359 ರೆತರು ಮತಾಧಿಕಾರ ಚಲಾಯಿಸಿದ್ದಾರೆ.ತಡರಾತ್ರಿವರೆಗೂ ಮತ ಎಣಿಕೆ ನಡೆದಿತ್ತು. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಅವರು ಫಲಿತಾಂಶಕ್ಕಾಗಿ ಮತಕೇಂದ್ರದ ಎದುರು ಕಾರಿನಲ್ಲಿ ಕಾಯ್ದು ಕುಳಿತಿರುವುದು ಕಂಡುಬಂದಿತು.
ಸಚಿವೆ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅಭ್ಯರ್ಥಿಯಾಗಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೆತರ ಪುನಶ್ಚೇತನ ಪೆನಲ್ ನೇತತ್ವ ವಹಿಸಿಕೊಂಡಿದ್ದರಿಂದ ಹಾಗೂ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ಕಾರ್ಖಾನೆ ಚುನಾವಣಾ ಕಣ ಪ್ರವೇಶಿಸಿದ್ದರಿಂದ ಪ್ರತಿಷ್ಠೆಯಾಗಿ ಪರಿಣಮಿಸಿತು. ಕಾರ್ಖಾನೆ ಮಾಜಿ ಅಧ್ಯ ನಾಸಿರ್ ಬಾಗವಾನ್ ಅವರ ರೆತರ ಹಾಗೂ ಕಾರ್ಮಿಕರ ಹಿತರಣಾ ಪೆನಲ್ ಮತ್ತು ರೆತಸಂದ ಮುಖಂಡ ಬಸವರಾಜ ಮೋಕಾಶಿ ನೇತತ್ವದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವದ್ಧಿ ಪೆನಲ್ ಸ್ಪರ್ಧೆಗಿಳಿದಿದ್ದರಿಂದ ಚುನಾವಣೆ ಪೆಪೋಟಿಯಿಂದ ಕೂಡಿತ್ತು. ಚುನಾವಣಾಧಿಕಾರಿಯಾಗಿ ಪ್ರಭಾವತಿ ಕೀರಪುರ ಕರ್ತವ್ಯ ನಿರ್ವಹಿಸಿದರು.
ಮತ ಚಲಾಯಿಸಿದ ಸಚಿವೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಮತ್ತು ಅವರ ತಾಯಿ ಹಾಗೂ ಸ್ಪರ್ಧಿಗಳಾದ ಚನ್ನರಾಜ ಹಟ್ಟಿಹೊಳಿ, ನಾಸಿರ್ ಬಾಗವಾನ್, ಬಸವರಾಜ ಮೋಕಾಶಿ ಮತಚಲಾಯಿಸಿದರು.
ಹೆಚ್ಚಾದ ಮತದಾನ: ಕಾರ್ಖಾನೆ ಗುರುತಿನ ಚೀಟಿ ಜತೆಗೆ ಆಧಾರ್ ಕಾರ್ಡ್, ಡ್ರೆವಿಂಗ್ ಲೆಸನ್ಸ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಕಲ್ಪಿಸಿದ್ದರಿಂದ ಮತದಾನಕ್ಕೆ ಮತ್ತಷ್ಟು ಅನುಕೂಲವಾಯಿತು. ಕಾರ್ಖಾನೆ ಅಧಿಕಾರಿಗಳು ಸಿಬ್ಬಂದಿ ಮೂಲಕ ಗುರುತಿನ ಚೀಟಿ ಮರೆತುಬಂದ ಮತದಾರರಿಗೆ ಷೇರು ಸಂಖ್ಯೆ ಹುಡುಕಿಕೊಡಲು ನೆರವಾದರು. ಅಂಗವಿಕಲರು, ವದ್ಧರನ್ನು ಮತದಾನಕ್ಕೆ ಕರೆತಂದಿದ್ದು ವಿಶೇಷವಾಗಿತ್ತು.
ಶುಕ್ರವಾರ ಮತ್ತು ಶನಿವಾರ ಎಡಬಿಡದೆ ಸುರಿದ ಮಳೆ ಭಾನುವಾರ ವಿರಾಮ ನೀಡಿದ್ದರಿಂದ ಮತದಾನ ಸುಸೂತ್ರವಾಗಿ ನಡೆಯಿತು. ವೈದ್ಯಕಿಯ ಸೇವೆ, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆ ಮಾಡಲಾಗಿತ್ತು.
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೆತರ ಜೀವನಾಡಿ. ರೆತರು ಇಟ್ಟ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದು, ಕಾರ್ಖಾನೆ ಅಭಿವದ್ಧಿ ಮೂಲಕ ವೆಭವ ಮರುಸ್ಥಾಪಿಸುತ್ತೇವೆ. ಎಲ್ಲ ಹಿರಿಯರ, ನಾಯಕರ ಬೆಂಬಲದೊಂದಿಗೆ ಪೆನಲ್ ರಚಿಸಿದ್ದೇವೆ.
> ಲಕ್ಷಿ$್ಮ ಹೆಬ್ಬಾಳ್ಕರ್ ಸಚಿವೆ