ಜೇಸಿ ಸಪ್ತಾಹ ಪ್ರಯುಕ್ತ ಮಲಪ್ರಭಾ ನದಿಗೆ ಶನಿವಾರ ಬಾಗಿನ ಅರ್ಪಿಸಲಾಯಿತು. ರವೀಂದ್ರ ಹರವಿ, ಚಂದ್ರು ಮಾಳದಕರ, ಮಹಾಂತೇಶ ಹೊಸಮನಿ, ಈರಣ್ಣ ಬೆನಕಟ್ಟಿ ಇತರರು ಇದ್ದರು. 
ಜಿಲ್ಲೆ

ಮಲಪ್ರಭಾ ನದಿಗೆ ಬಾಗಿನ

Belagavi

ರಾಮದುರ್ಗ: ಅಮೂಲ್ಯ ಸಂಪತ್ತಾಗಿರುವ ನೀರನ್ನು ಮಿತವಾಗಿ ಬಳಸಬೇಕು ಎಂದು ಜೆಸಿಐ ವಲಯ ಕಾರ್ಯದರ್ಶಿ ರವೀಂದ್ರ ಹರವಿ ಹೇಳಿದ್ದಾರೆ. ಜೆಸಿಐ ಸಂಸ್ಥೆಯ ಸಪ್ತಾಹ ನಿಮಿತ್ತ 2ನೇ ದಿನದ ಕಾರ್ಯಕ್ರಮದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು. ಜೆಸಿಐ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ದಾಸರ ಮಾತನಾಡಿ, ಜೇಸಿ ಸಪ್ತಾಹ ಒಂದು ವಾರ ನಡೆಯುವ ಕಾರ್ಯಕ್ರಮ. ತಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಅನುಕೂಲವಾಯಿತು ಎಂದರು. ಚಂದ್ರು ಮಾಳದಕರ, ಮಹಾಂತೇಶ ಹೊಸಮನಿ, ಈರಣ್ಣ ಬೆನಕಟ್ಟಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.