Malakhed Uttarqadhi Matha Vrundavana Summurged In Kagina 
ಜಿಲ್ಲೆ

ಮಳಖೇಡ : ಜಯತೀರ್ಥರ ವೃಂದಾವನ ಜಲಾವೃತ

ಹೊಸ ಸೇತುವೆ ಮೇಲಿಂದ ಸುಗಮ ಸಂಚಾರ : ಹಳೆಯ ಸೇತುವೆ ಮುಳುಗಡೆ

ಮಳಖೇಡ: ಎರಡು ದಿನದ ನಿರಂತರ ಮಳೆ ಹಾಗೂ ಜಲಾಶಯದಿಂದ ಹರಿಬಿಟ್ಟ ನೀರಿನಿಂದಾಗಿ ಕಾಗಿಣಾ ನದಿಯ ಹಳೆಯ ಸೇತುವೆ ಮುಳುಗಡೆಯಾಗಿದ್ದು, ಉತ್ತರಾದಿ ಮಠದ ಶ್ರೀ ಜಯತೀರ್ಥರ ಮೂಲ ವೃಂದಾವನ ಸಂಪೂರ್ಣ ಜಲಾವೃತಗೊಂಡಿದೆ.
ಈ ಮೊದಲು ಸೇತುವೆ ಮುಳುಗಡೆಯಾದಾಗ ಪ್ರಯಾಣಿಕರು ಬಹಳ ತೊಂದರೆ ಅನುಭವಿಸುತ್ತಿದ್ದರು. ಈಗ ಹಳೆಯ ಸೇತುವೆ ಮುಳುಗಿದರೂ ಇತ್ತೀಚೆಗಷ್ಟೆ ಲೋಕಾರ್ಪಣೆಗೊಂಡ ಹೊಸ ಸೇತುವೆ ಮೇಲೆ ವಾಹನ ಸಂಚಾರ ಸುಗಮವಾಗಿದ್ದರಿಂದ ಅಂತಾರಾಜ್ಯ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವಾಗಿದೆ ಎನ್ನುತ್ತಾರೆ ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ.
ಕಾಗಿಣಾ ಪ್ರವಾಹದಿಂದ ಜಯತೀರ್ಥರ ಮೂಲ ವೃಂದಾವನ ಜಲಾವೃತಗೊಂಡಿದೆ. ಸಂಗಾವಿ(ಎA) ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ನದಿ ಪಾತ್ರದ ಸಾವಿರಾರು ಎಕರೆಯಲ್ಲಿದ್ದ ಉದ್ದು, ಹೆಸರು, ತೊಗರಿ ಬೆಳೆಗಳು ಮುಳುಗಡೆಯಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಜಾನುವಾರಗಳ ಸಂತೆ ಆವರಣ ಸಂಪೂರ್ಣ ಜಲಾವೃತಗೊಂಡಿದೆ.