ಹಾಸನದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ನೂವಾ ಬೈ ಮೈನ್ ಡೈಮಂಡ್ಸ್ ಸಂಗ್ರಹವನ್ನು ಗ್ರಾಹಕರಾದ ಹರ್ಷಿತಾ ಹಾಗೂ ಅನಮ್ ಸಮಿ ಅನಾವರಣಗೊಳಿಸಿದರು. ಆರ್.ಕೆ. ದಯಾನಂದ, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. 
ಜಿಲ್ಲೆ

ಮಲಬಾರ್ ಗೋಲ್ಡ್‌ನಲ್ಲಿ ನುವಾ ಬೈ ಮೈನ್ ಡೈಮಂಡ್ಸ್ ವಜ್ರಾಭರಣ

ಹಾಸನ: ವಿಶ್ವದ ಅತೀ ದೊಡ್ಡ ರೀಟೇಲ್ ಚಿನ್ನಾಭರಣ ಸಂಸ್ಥೆಯಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಇತ್ತೀಚಿನ ಸೊಗಸಾದ ನೈಸರ್ಗಿಕ ವಜ್ರದ ಆಭರಣ ಸಂಗ್ರಹವಾದ ನೂವಾ ಬೈ ಮೈನ್ ಡೈಮಂಡ್ಸ್ ವಜ್ರ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಸಂಗ್ರಹವನ್ನು ಗ್ರಾಹಕರಾದ ಹರ್ಷಿತಾ ಹಾಗೂ ಅನಮ್ ಸಮಿ ಅನಾವರಣಗೊಳಿಸಿದರು.

ಈ ಹೊಸ ಸಂಗ್ರಹದಲ್ಲಿ ವಿನೂತನವಾಗಿರುವ ವಜ್ರಾಭರಣಗಳ ಡಿಸೈನ್‌ಗಳು, ವೇವ್ಸ್, ಫೋಲ್ಡ್ ಮತ್ತು ಟೆಕ್ಚರ್‌ಗಳನ್ನು ಒಳಗೊಂಡಿವೆ. ಈ ಸಂಗ್ರಹದಲ್ಲಿ ಪ್ರತಿಯೊಂದು ಆಭರಣವು ಅಪಾರ ಕಾಳಜಿ ಮತ್ತು ನಿಖರತೆಯಿಂದ ರಚಿಸಲಾಗಿದೆ. ಇದು ಇಂದಿನ ಆಧುನಿಕ ಮಹಿಳೆಯರ ಮತ್ತು ಯುವತಿಯರ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಸಂಗ್ರಹವು ಧರಿಸಲು ಬಹಳ ಅನುಕೂಲಕರ ಮತ್ತು ಹಗುರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥ ಆರ್.ಕೆ. ದಯಾನಂದ, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.