ಜಿಲ್ಲೆ

ಅಜಯಸಿಂಗ್ ಮನೆಯ ವಾಚ್ ಮೆನ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಾಬುರಾವ ಯಡ್ರಾಮಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜೇವರ್ಗಿ ಶಾಸಕರು ಆಗಿರುವ ಕೆಕೆಆರ್ ಡಿಬಿ ಅದ್ಯಕ್ಷರಾದ ಅಜಯಸಿಂಗ್ ಅವರ ಮನೆಯ ವಾಚಮೆನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ದೇವಯ್ಯ ( 32 ) ಆತ್ಮಹತ್ಯೆ ಮಾಡಿಕೊಂಡ ‌ಕಾವಲುಗಾರ. ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿಯಾಗಿದ್ದ ದೇವಯ್ಯ ಕಳೆದ ನಾಲ್ಕೈದು ವರ್ಷಗಳಿಂದ ವಾಚಮೆನ್ ಆಗಿ ಕೆಲಸ ಮಾಡುತಿದ್ದರು.

ನಗರದ ಎನ್ ವಿ ಕಾಲೇಜಿನ ಮುಂಭಾಗದ ಶರಣ ನಗರದಲ್ಲಿರುವ ಅಜಯಸಿಂಗ್ ಮನೆ ಆವರಣದಲ್ಲಿರುವ ಮರಕ್ಕೆ‌ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ತಡ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಡುಗೆ ಮಾಡುವ ವ್ಯಕ್ತಿ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಗೆ ಕಾರಣ ಗೊತ್ತಾಗಿಲ್ಲ. ದೇವಯ್ಯ ಅವರ ಕೌಟುಂಬಿಕ ಸಮಸ್ಯೆ ಇರಬಹುದು ಎನ್ನಲಾಗಿದೆ.
ಅಜಯಸಿಂಗ್‌ ಮೂರು ದಿನಗಳಿಂದ ಕಲಬುರಗಿಯಲ್ಲಿ ಇದ್ದರು. ನಿನ್ನೆ ಬೆಳಿಗ್ಗೆ ಶಿರಡಿಗೆ ತೆರಳಿದ್ದಾರೆ..ಅಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿದ್ದಾರೆ.

ಸ್ಥಳಕ್ಕೆ ಬ್ರಹ್ಮ‌ಪೂರ‌ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ಮಾಡಿದರು. ಈ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.