ಪುತ್ತೂರು: ಗಾಂಧೀಜಿಯ ಬಗ್ಗೆ ಯಾವುದೇ ಅರಿವು ಇಲ್ಲದ ವ್ಯಕ್ತಿಗಳು ಅವರನ್ನು ವಿಲನ್ ಆಗಿ ರೂಪಿಸುತ್ತಿದ್ದಾರೆ. ಮಹಾತ್ಮರ ಬಗ್ಗೆ ಯಾವುದೇ ಮಾತುಗಳನ್ನಾಡಲು ಯೋಗ್ಯತೆಗಳಿರಬೇಕು. ಮಹಾತ್ಮ ಗಾಂಽಜಿ ಅವರಲ್ಲಿದ್ದ ಸತ್ಯ, ಪ್ರಾಮಾಣಿಕತೆ ಮತ್ತು ಎಲ್ಲರನ್ನೂ ಪ್ರೀತಿಸುವ ಗುಣವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗಾಂಽಜಿಯನ್ನು ಬೊಗಸೆಯಲ್ಲಿ ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು.
ಪುತ್ತೂರಿನ ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ ಅವರ ದರ್ಬೆ ಮಕ್ಕಳ ಮಂಟಪದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ನಡೆದ ಗಾಂಧೀ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಹಿಂಸೆಯ ಮೂಲಕ ಬರಿಗೈಯಲ್ಲಿ ದೇಶವನ್ನು ಒಂದಾಗಿಸಿದ ಕೀರ್ತಿ ಗಾಂಽಜಿಗೆ ಸಲ್ಲುತ್ತದೆ. ಗಾಂಧೀಜಿಯ ಅಹಿಂಸೆಯ ಅಸ್ತ್ರ ಉಪಯೋಗಿಸದಿದ್ದಲ್ಲಿ ಬ್ರಿಟಿಷರನ್ನು ಭಾರತದಿಂದ ತೆರಳುವಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಗಾಂಽಜಿ ಪತ್ರಕರ್ತರಾಗಿದ್ದು, ಪತ್ರಿಕೆಯ ಮೂಲಕ ಸಾಮಾಜಿಕ ಬದಲಾವಣೆಯ ಸ್ಪಷ್ಟ ಪರಿಕಲ್ಪನೆ ಅವರಲ್ಲಿತ್ತು. ಇತ್ತೀಚೆಗೆ ಸಂವಿಧಾನದ ೪ನೇ ಅಂಗವೆಂದು ಗುರುತಿಸಲ್ಪಟ್ಟಿರುವ ಪತ್ರಿಕೆ ಹಾಗೂ ಮಾಧ್ಯಮಗಳು ಟಿಆರ್‌ಪಿ ಮತ್ತು ಹಣಕ್ಕಾಗಿ ಸಿದ್ಧಾಂತಗಳಿಂದ ವಿಮುಖವಾಗುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಕ್ಕಳ ಮಂಟಪದ ರೂವಾರಿ ಡಾ.ಎನ್.ಸುಕುಮಾರ ಗೌಡ ವಹಿಸಿದ್ದರು. ಮಕ್ಕಳ ಮಂಟಪದ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಸ್ವಾಗತಿಸಿದರು. ಬಂಟಮಲೆ ಪ್ರತಿಷ್ಠಾನದ ಸಂಚಾಲಕ ಎ.ಕೆ. ಹಿಮಕರ ವಂದಿಸಿದರು.