ಪುತ್ತೂರು: ಮಕ್ಕಳ ಅವಶ್ಯಕತೆಯನ್ನು ಚರ್ಚೆ ನಡೆಸದೆ ಸ್ಪರ್ಧೆಗಳನ್ನು ನಡೆಸುವ ಸಭೆಯಲ್ಲ. ಮಕ್ಕಳಿಗೆ ಸಂಬಂಽಸಿದ ಇಲಾಖೆಗಳ ಅಽಕಾರಿಗಳು ಆಗಮಿಸಿದ ಬಳಿಕ ಮಕ್ಕಳ ಗ್ರಾಮಸಭೆಯನ್ನು ನಡೆಸಿ. ಮಕ್ಕಳ ಹಕ್ಕಿನ ಬಗ್ಗೆ ಕೇಳಲು ಬೇಕಾದ ಅಽಕಾರಿಗಳು ಬಂದ ಬಳಿಕ ಸಭೆ ನಡೆಯಲಿ. ಶಿಕ್ಷಣ ಇಲಾಖೆಯ ಅಽಕಾರಿಗಳೇ ಇಲ್ಲದೆ ಕಾಟಾಚಾರಕ್ಕೆ ಸಭೆಯನ್ನು ನಡೆಸುವುದು ಬೇಡ.
ತಣ್ಣೀರುಪಂಥ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಎಸ್.ಡಿ.ಎಂ. ಸಿ. ಅಧ್ಯಕ್ಷರಿಂದ ಕೇಳಿ ಬಂದ ಆಕ್ಷೇಪಗಳಿವು.
ಮಕ್ಕಳ ಗ್ರಾಮಸಭೆಯಲ್ಲಿ ರಸಪ್ರಶ್ನೆ, ಓಟ ಮಾಡಬೇಕಾದ್ದಲ್ಲ, ಶಾಲೆಗಳ ಮೂಲಸೌಕರ್ಯಗಳು, ಮಕ್ಕಳ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸಬೇಕಾಗಿದೆ. ಮಕ್ಕಳ ಹಕ್ಕುಗಳನ್ನು ಕೇಳುವ ನಿಟ್ಟಿನಲ್ಲಿ ಗ್ರಾಮಸಭೆಯ ಅಗತ್ಯವಿದೆ. ಸರ್ಕಾರದಿಂದ ಬಂದ ಆದೇಶವನ್ನು ಪಾಲನೆ ಮಾಡುವುದಕ್ಕೆ ಹಾಗೂ ಗ್ರಾಮಸಭೆ ಮಾಡಿರುವುದನ್ನು ದಾಖಲೆಯಲ್ಲಿ ತೋರಿಸುವುದಕ್ಕೆ ಬ್ಯಾನರ್ ಹಾಕಿ ಕಾರ್ಯಕ್ರಮ ಮುಗಿಸುವುದು ಬೇಡ. ಇಲಾಖೆಯ ಅಽಕಾರಿಗಳು ಸಭೆಗೆ ಆಗಮಿಸಿದ ಬಳಿಕ ಗ್ರಾಮಸಭೆಯನ್ನು ನಡೆಸಿ ಎಂದು ಪಟ್ಟು ಹಿಡಿದರು.
ಮಕ್ಕಳ ಗ್ರಾಮಸಭೆಯ ಬಗ್ಗೆ ಇಲಾಖೆಗಳ ಅಽಕಾರಿಗಳಿಗೆ ತಾತ್ಸಾರ ಭಾವನೆಯಿರುವುದು ಸಭೆಗೆ ಗೈರಾಗುವ ಮೂಲಕ ಎತ್ತಿ ತೋರಿಸಿದ್ದಾರೆ. ಸಂಬಂಧಪಟ್ಟ ಅಽಕಾರಿಗಳು ಬರದೆ ಸಭೆಯನ್ನು ನಡೆಸಬಾರದೆಂಬ ಎಲ್ಲರೂ ಪಟ್ಟು ಹಿಡಿದ ಕಾರಣದಿಂದ ಸಭೆ ನಡೆಸಲು ಮುಂದಾದ ಅಽಕಾರಿಗಳು ಕಂಗಾಲಾಗಿ ಸಭೆಯನ್ನು ಮುಂದೂಡುವ ತೀರ್ಮಾನಕ್ಕೆ ಬಂದರು.
ತಣ್ಣೀರುಪಂಥ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯ, ಸದಸ್ಯರಾದ ಅನಿಲ್, ನಿಸಾರ್ ಕುದ್ರಾಡ್ಕ, ಪಂಚಾಯಿತಿ ಕಾರ್ಯದರ್ಶಿ ಆನಂದ, ಉಜಿರುಬೆಟ್ಟು, ತುರ್ಕಳಿಕೆ, ಕಲ್ಲೇರಿ, ತಣ್ಣೀರುಪಂಥ, ಕರಾಯ, ಕಲ್ಲಕಟ್ಟಣಿ ಪ್ರೌಢಶಾಲೆಯ ಮಕ್ಕಳು, ಮುಖ್ಯಶಿಕ್ಷಕರು ಹಾಗೂ ಎಸ್. ಡಿ. ಎಂ. ಸಿ. ಅಧ್ಯಕ್ಷರು ಪಾಲ್ಗೊಂಡಿದ್ದರು.
ಅಽಕಾರಿಗಳು ಬರಬೇಕು
ಗ್ರಾಮಸಭೆ ನಡೆಸಬೇಕಾ ಬೇಡವಾ ಎಂಬುದನ್ನು ಮಕ್ಕಳು ತಿಳಿಸಲಿ ಎಂದು ಸೇರಿದ್ದ ಅಽಕಾರಿಗಳು ಹೇಳುತ್ತಿದ್ದಂತೆ ಶಾಲೆಯ ವಿದ್ಯಾರ್ಥಿಗಳು ಎದ್ದು ನಿಂತು ಅಽಕಾರಿಗಳು ಬರಬೇಕು. ಇಲ್ಲದೇ ಹೋದರೆ ನಮ್ಮ ಸಮಸ್ಯೆಯನ್ನು ಯಾರು ಬಗೆಹರಿಸುತ್ತಾರೆ? ಎಂದು ಹೇಳಿದರು. ಇದಕ್ಕೆ ಉಳಿದ ವಿದ್ಯಾರ್ಥಿಗಳೂ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದರು. ಇದರಿಂದ ಕಾಟಾಚಾರಕ್ಕೆ ಸಭೆ ನಡೆಸಲು ಮುಂದಾದ ಅಽಕಾರಿಗಳು ಕಂಗಾಲಾಗುವ ಸ್ಥಿತಿ ನಿರ್ಮಾಣವಾಯಿತು.
ಮಧ್ಯಾಹ್ನದವರೆಗೆ ಕಾದಿದ್ದೇ ಬಂತು
ಗ್ರಾಮಸಭೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ತಡವಾಗಿಯಾದರೂ ಅಽಕಾರಿಗಳು ಬಂದಾರು ಎಂಬ ಕಾರಣವನ್ನು ಪ್ರಾರಂಭದಲ್ಲಿ ನೀಡಲಾಗಿತ್ತು. ಸಭೆ ನಡೆಸಲು ಅಽಕಾರಿಗಳು ಬರಬೇಕೆಂದು ಹೇಳಿದ್ದರಿಂದ ಸಂಪರ್ಕಿಸುವ ಪ್ರಯತ್ನ ನಡೆಯಿತು. ಮಧ್ಯಾಹ್ನದವರೆಗೂ ಯಾವುದೇ ಅಽಕಾರಿ ಸುಳಿಯಲಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಧ್ಯಾಹ್ನದವರೆಗೆ ಅಽಕಾರಿಗಳನ್ನು ಕಾದದ್ದೇ ಹೊರತು ಅವರು ಬರುವ ಉತ್ಸಾಹ ತೋರಿಲ್ಲ. ಕೊನೆಗೆ ಸಭೆಯನ್ನು ಮುಂದೂಡಲಾಯಿತು.