ಸವಣೂರ: ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಂಡರೆ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸರಸ್ವತಿ ಪೂಜೆ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭವಿಷ್ಯವನ್ನು ನಿರ್ಧರಿಸುವ ಸಮಯ ವಿದ್ಯಾರ್ಥಿ ಜೀವನವಾಗಿದೆ. ಕಳೆದ ಸಮಯ, ಕಳೆದ ಮಾತು ಮತ್ತೆ ಸಿಗಲಾರದು ಎಂದು ಕಿವಿಮಾತು ಹೇಳಿದರು.
ವರ್ತಕ ಪ್ರದೀಪ ಸವೂರ ಮಾತನಾಡಿದರು. ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಯೋಧ ಮಹಾಂತೇಶ ಕಾಕಂಬಿ, ಬಸವರಾಜ ಸವೂರ, ಶ್ರೀಕಾಂತ ದುಂಡಿಗೌಡ್ರ, ಅಶೋಕ ಉಳ್ಳಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾಗನಗೌಡ ಪೊಲೀಸಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ರೂಪಾ. ಎನ್. ಎಚ್., ಶಿಲ್ಪಾ ಕೂಡಲ, ಗೀತಾ ಕೂಡಲ, ಭಾವನಾ ಮಡ್ಲೀಕರ, ಎ.ಎಚ್. ಬರಡಿ, ಐ. ಕೆ. ಕಲ್ಮನಿ, ವಿನಯ ಭಜಂತ್ರಿ, ಅಮಿತ ಸರ್ವದೆ, ಸರಸ್ವತಿ ಮುಗಳಿ ಇತರರು ಪಾಲ್ಗೊಂಡಿದ್ದರು. ಉಪನ್ಯಾಕ ಐ.ಕೆ. ಕಲ್ಮನಿ ಹಾಗೂ ವಿನಯ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.