ಬಾದಾಮಿ: ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದಿರಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೋಸ್ಕೋ ಕಾಯ್ದೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನಿನ ಬಗ್ಗೆ ಅರಿವು ಹೊಂದುವುದರಿಂದ ನಾವು ಅಪರಾಧ ಪ್ರಕರಣಗಳಿಂದ ರಕ್ಷಣೆ ಪಡೆಯಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ, ಪ್ರಾಚಾರ್ಯ ಶಂಕರರಾವ ಕುಲಕರ್ಣಿ, ಸಂಗಮೇಶ ಉಳ್ಳಾಗಡ್ಡಿ, ಭಾಗ್ಯಲಕ್ಷ್ಮೀ ಟಿ.ಎಚ್. ಕೀರ್ತಿ ಬಡಿಗೇರ, ರಮೇಶ ಹಂಜಿ, ರಮೇಶ ಕತ್ತಿಕೈ, ಬಸವರಾಜ ಚಿಕ್ಕಣ್ಣವರ, ಬಸವರಾಜ ಸಿಂದಗಿಮಠ, ಶ್ರೀನಿವಾಸ ಈಳಗೇರ, ರಂಗನಾಥ ಈಳಗೇರ, ಅಶೋಕ ಪೂಜಾರಿ, ಎಸ್.ಬಿ. ಮುದೇನಗುಡಿ, ಕೇಶವ ರಘುವೀರ, ದುರ್ಗಾ ಬಿ., ವೀರೇಶ ಮರಿಗೌಡರ, ಹನುಮಂತ ಬಂಡಿವಡ್ಡರ ಇತರರಿದ್ದರು.