ರಾಂಪುರದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಉದ್ಘಾಟಿಸಿದರು. ಕೆ.ಡಿ. ಗುಬಚಿ, ಬಿ.ಎಂ. ಹಳೇಮನಿ ವಕೀಲರು, ಬಿ.ಬಿ. ಹೊಸಕೋಟಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಕಾನೂನು ಅರಿವಿರಲಿ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ಕನಿಷ್ಠ ಸಾಮಾನ್ಯ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಗೇರಿ ಹೇಳಿದರು.

ರಾಂಪುರದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ರಬಕವಿ-ಬನಹಟ್ಟಿ ತಾಲೂಕು ಆಡಳಿತ, ಜ್ಞಾನೋದಯ ಶಿಕ್ಷಣ ಸಂಸ್ಥೆಯ ಶ್ರೀ ಈ. ಹೋ. ಬರಗಿ ಅನುದಾನಿತ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮೂಲ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹಿರಿಯರ ಪಾತ್ರ ಮುಖ್ಯ ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಲಾಗುವುದು. ಕಾರಣ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಮೂಲ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಕೆ.ಡಿ. ತುಬಚಿ, ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿ.ಟಿ. ಕೋರಿ ವಕೀಲರು ಉಪನ್ಯಾಸ ನೀಡಿದರು.
ರಾಂಪುರದ ಜ್ಞಾನೋದಯ ಶಿಕ್ಷಣ ಸಂಸ್ಥೆ ಚೇರ್ಮನ್ ಬಿ. ಜಿ. ಹೊಸಕೋಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಎಸ್. ಜಿ. ಸಲಬಣ್ಣವರ, ಬಿ.ಎಂ. ಖಾರ್ವೇಕರ, ಕೆ.ಎಸ್. ನ್ಯಾಮಗೌಡ, ಬಿ.ಎಂ. ಹಳೇಮನಿ, ಎಸ್‌ಐ ಎಸ್. ಎಸ್. ಬಾಬಾನಗರ, ಪರಪ್ಪ ಬಿಳ್ಳೂರ, ಶಿವು ತೆಳಗಿನಮನಿ, ಎಸ್.ವಿ. ಅಮ್ಮಲಜೇರಿ, ಜಿ.ಟಿ. ಕೊಡತೆ ಆಗಮಿಸಿದ್ದರು.

ಸಿ.ವಿ. ಬಸೆಟ್ಟಿ, ಎನ್.ಎಂ. ಸೌದಾಗರ, ಎಂ.ಡಿ. ಜಮಖಂಡಿ, ಎಸ್.ಎಂ. ಬಾವಿಕಟ್ಟಿ, ಎಸ್.ಎಂ. ಕುಲಕರ್ಣಿ, ಎ.ಕೆ. ಖಟಾವಕರ, ಎಂ.ಕೆ. ಜಿಟ್ಟಿಮನಿ, ವಿಶ್ವನಾಥ ಜಿಗಜಿನ್ನಿ ಇತರರಿದ್ದರು.