ಜಿಲ್ಲೆ

ಅಂಗವಿಕಲರಿಗೆ ಅವಕಾಶ ಕಲ್ಪಿಸಿ

ಜಗದೀಶ ಹೊಂಬಳಿ

ಬೆಳಗಾವಿ: ಅಂಗವಿಕಲರ ಬಗ್ಗೆ ಅನುಕಂಪ ತೋರಿಸುವುದರ ಬದಲು ಅವರಿಗೆ ಸೂಕ್ತ ಅವಕಾಶ ಕಲ್ಪಿಸಿ ಕೊಡಬೇಕಾಗಿದೆ ಎಂದು ಶಿಕ್ಷಕ ಎಸ್.ಎಸ್.ಯಡವಿನಾಯ್ಕರ್ ಹೇಳಿದರು.

ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಅಂಗವಿಕರಿಗೆ ವಿವಿಧ ರಂಗಗಳಲ್ಲಿ ಪ್ರೋತ್ಸಾಹ ಸಿಗಬೇಕಾಗಿದೆ. ಕೌಶಲ ವೃದ್ಧಿಯಂತಹ ಉಪಕ್ರಮಗಳು ಹಾಗೂ ಪ್ರತಿಭೆ ಅಭಿವ್ಯಕ್ತಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಂಡು ಮುನ್ನೆಲೆಗೆ ತರಬೇಕಾಗಿದೆ ಎಂದರು. ಶಾಲೆ ಮುಖ್ಯ ಶಿಕ್ಷಕ ಕೆ.ಎಂ. ಮುಲ್ಲಾ, ಶಿಕ್ಷಕರಾದ ಎಸ್.ಎಂ. ಗಾಣಗಿ, ಐ.ಜಿ. ಪನಾಲಗಡ, ಶಿವಾನಂದ ಬೆಕವಾಡ, ಮಂಜುನಾಥ ನಂದಿ, ಮಧು ಕಾಳ್ಯಾನಟ್ಟಿ ಹಾಗೂ ಮಕ್ಕಳು ಇದ್ದರು.