ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್. ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಕಮಿಷನರ್ ಕಚೇರಿ ಸಭಾಂಗಣದಲ್ಲಿ ದಲಿತರ ಮಾಸಿಕ ಕುಂದುಕೊರತೆ ಸಭೆ ನಡೆಯಿತು. ಡಿಸಿಪಿ ಕೆ. ರವಿಶಂಕರ್, ಎಸ್ಪಿ ಸಿ.ಎ. ಸೈಮನ್ ಉಪಸ್ಥಿತರಿದ್ದರು.  
ಜಿಲ್ಲೆ

ಹೋಸ್ಟೆಲ್ ವ್ಯವಸ್ಥೆ ಸರಿಯಾಗಿ ಕಲ್ಪಿಸಿ

Chethan padubidri

ಪ್ರಮುಖ ಮುಖ್ಯಾಂಶಗಳು

  • ದಲಿತರ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪ
  • ಪೊಲೀಸರು ದಲಿತರ ಸಮಸ್ಯೆಗಳಿಗೆ ಸ್ಪಂದಿಸಿರುವ ಬಗ್ಗೆ ಮೆಚ್ಚುಗೆ
ಮಂಗಳೂರು: ಶನಿವಾರ ಕಮಿಷನರೇಟ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್. ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಕಮಿಷನರ್ ಕಚೇರಿ ಸಭಾಂಗಣದಲ್ಲಿ ದಲಿತರ ಮಾಸಿಕ ಕುಂದುಕೊರತೆ ಸಭೆ ನಡೆಯಿತು.
ಜಾಗದ ತಕರಾರು, ಕೌಟುಂಬಿಕ ಕಲಹ, ಹಲ್ಲೆ, ಗಾಂಜಾ, ದೌರ್ಜನ್ಯ, ಕಿರುಕುಳ ಮೊದಲಾದ ವಿಷಯಗಳನ್ನು ದಲಿತ ಮುಖಂಡರು ಪ್ರಸ್ತಾಪಿಸಿದರು.
ಎಸ್ಸಿ/ಎಸ್ಟಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹೋಸ್ಟೆಲ್ ವ್ಯವಸ್ಥೆ ಸರಿಯಾಗಿ ಕಲ್ಪಿಸಿಲ್ಲ. ದೂರದೂರಿಂದ ಬರುವವರಿಗೆ ಶಿಕ್ಷಣಕ್ಕೆ ಭಾರಿ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ಅವರು ಹೇಳಿದರು. ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉತ್ತರಿಸಿ, ನಾವು 2 ಹೋಸ್ಟೆಲ್ ಕೇಳಿದ್ದೇವೆ ಎಂದರು. ಸರ್ಕಾರದಿಲ್ಲದಿದ್ದರೆ ಖಾಸಗಿ ಕಟ್ಟಡ ಬಾಡಿಗೆ ಪಡೆದು ವ್ಯವಸ್ಥೆ ಮಾಡಿ. ಸರ್ಕಾರವೇ ಆದೇಶದಲ್ಲಿ ತಿಳಿಸಿದೆ ಎಂದರು. ವ್ಯವಸ್ಥೆ ಮಾಡಿಕೊಡಿ ಎಂದು ಡಿಸಿಪಿಯವರು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗೆ ಸೂಚಿಸಿದರು.
ಗಿರೀಶ್ ಉಳ್ಳಾಲ, ಚಿನ್ನಪ್ಪ ಬಂಗೇರ, ಜಯ, ಭೀಮ ಮೂಲ್ಕಿ ಮತ್ತಿತರ ದಲಿತ ಮುಖಂಡರು ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪೊಲೀಸನೊಬ್ಬನ ಮೇಲೆ ದರ್ಪದಿಂದ ಮಾತನಾಡುವ ಬಗ್ಗೆ ಆರೋಪ ಕೇಳಿಬಂದರೆ ಇನ್ನುಳಿದ ಪೊಲೀಸರು ದಲಿತರ ಸಮಸ್ಯೆಗಳಿಗೆ ಸ್ಪಂದಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಕ್ರೈಂ ಮತ್ತು ಟ್ರಾಫಿಕ್ ಡಿಸಿಪಿ ಕೆ. ರವಿಶಂಕರ್, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಸಿ.ಎ. ಸೈಮನ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕೇಳಿ ಬಂದ ಮುಖ್ಯ ವಿಷಯಗಳು...
ಮೂಲ್ಕಿ ಮತ್ತು ಬಪ್ಪನಾಡು ಮುಖ್ಯ ದ್ವಾರದ ಬಳಿ ಹೆಚ್ಚಿನ ಅಪಘಾತ
ಆದಿದ್ರಾವಿಡ ಉಪಜಾತಿಯನ್ನು ಜಾತಿ ಎಂದು ನಮೂದಿಸಿರುವುದರಿಂದ ತೊಂದರೆ
ವೆನ್ಲಾಕ್, ಲೇಡಿಗೋಷನ್ ಪಕ್ಕ ಹೊರರಾಜ್ಯದವರಿಂದ ರಸ್ತೆ, ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ
ಉಳ್ಳಾಲ ಜಂಕ್ಷನ್‌ನಲ್ಲಿ ರಾಂಗ್‌ಸೈಡ್‌ನಲ್ಲಿ ಬರುವ ವಾಹನಗಳಿಂದ ಅಪಾಯ
ಕೋಟೇಶ್ವರ, ಸೋಮೇಶ್ವರ ಭಾಗಗಳಲ್ಲಿ ತೆರವುಗೊಳ್ಳದ ಫ್ಲೆಕ್ಸ್, ಬ್ಯಾನರ್
ಜ್ಯೋತಿ ಸರ್ಕಲ್‌ನಲ್ಲಿ ಅಂಬೇಡ್ಕರ್ ವೃತ್ತದ ನಾಮಫಲಕ ತೆರವುಗೊಳಿಸಿರುವುದು
ಅವೈಜ್ಞಾನಿಕ ವಾಮಂಜೂರು ಹೆದ್ದಾರಿ ಜಂಕ್ಷನ್‌ನಿಂದಾಗಿ ಆಗಾಗ್ಗೆ ಅಪಘಾತ
ಎಕ್ಕೂರು ಭಾಗದಲ್ಲಿ ಗಾಂಜಾ, ಅನೈತಿಕ ಚಟುವಟಿಕೆ, ಸಿಸಿ ಕ್ಯಾಮರಾ ಅಳವಡಿಸಿ
ಕಾವೂರಿನಲ್ಲಿ ಮಹಿಳೆಗೆ ಕಿರುಕುಳ, ರಾತ್ರಿ ಕ್ರಿಕೆಟ್ ಆಟಗಾರರಿಂದ ಯುವಕನಿಗೆ ಹಲ್ಲೆ-ಆರೋಪ
ದಲಿತರು ಹೆಚ್ಚಿನವರು ಕಾರ್ಮಿಕರು. ಹಾಗಾಗಿ ಸಭೆಯನ್ನು ಶನಿವಾರದ ಬದಲು ಭಾನುವಾರ ಇಡಿ
ಕರಾವಳಿ ವೃತ್ತ ಪಂಪ್‌ವೆಲ್‌ನಲ್ಲಿ ರಸ್ತೆ ಕಾಮಗಾರಿಗಾಗಿ ಬಂದ್ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಪಂಪ್‌ವೆಲ್‌ನಿಂದ ನಗರದ ಕಡೆ ರಸ್ತೆ ಪಕ್ಕ ಬಸ್ ನಿಲ್ದಾಣಗಳಿಲ್ಲದೆ ಪ್ರಯಾಣಿಕರಿಗೆ ತೊಂದರೆ
ಸಿಟಿ ಬಸ್ಸುಗಳಲ್ಲಿ ಕರ್ಕಶವಾಗಿ ಹಾಡುಗಳನ್ನು ಹಾಕುತ್ತಾರೆ. ಇದರಿಂದ ಕಿರಿಕಿರಿಯಾಗುತ್ತದೆ.