ಬೆಂಗಳೂರು: ಪೊಲೀಸ್ ಇಲಾಖೆಯ ಎಲ್ಲ ವಾಹನಗಳ ಮೇಲೆ ಕಡ್ಡಾಯವಾಗಿ ‘ಪೊಲೀಸ್’ ಎಂದು ಸ್ಟಿಕರಿಂಗ್ ಮಾಡಿಸುವಂತೆ ಡಿ.ಜಿ ಸೂಚನೆಯ ಮೇರೆಗೆ ಅಡಿಷನಲ್ ಡೈರೆಕ್ಟರ್ ಜನರಲ್ ಆ್ ಪೊಲೀಸ್ ಎಸ್.ಮುರುಗನ್ ಆದೇಶಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ 8 ಇಂಚು* 2 ಇಂಚು(ಕನಿಷ್ಠ), ನಾಲ್ಕು ಚಕ್ರದ ವಾಹನಗಳಿಗೆ 12 ಇಂಚು* 3 ಇಂಚು (ಕನಿಷ್ಠ) ಸ್ಟಿಕರಿಂಗ್ ಮಾಡಿಸಲು ಸೂಚಿಸಲಾಗಿದೆ.
ಪೊಲೀಸ್ ಇಲಾಖೆಯ ಕೆಲವು ವಾಹನಗಳ ಮೇಲೆ ‘ಪೊಲೀಸ್’ ಎಂಬ ಸ್ಟಿಕರಿಂಗ್ ಇಲ್ಲದೇ ಇರುವುದು ತಿಳಿದು ಬಂದಿದೆ. ಆದ್ದರಿಂದ ಎಲ್ಲಾ ಘಟಕಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪಾಲನಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಕೆಲವು ವಾಹನಗಳ ಮೇಲಿನ ಪೊಲೀಸ್ ಎಂಬ ಸ್ಟಿಕರಿಂಗ್ ಅನ್ನು ಕೆಲವು ಅಧಿಕಾರಿಗಳು ತೆಗೆಸಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ರೀತಿ ಮಾಡುವುದು ನಿಯಮ ಬಾಹಿರವಾಗಿರುತ್ತದೆ. ಯಾವುದೇ ಕಾರಣವಿಲ್ಲದೇ ಸ್ಟಿಕರಿಂಗ್ ತೆಗೆಸಿರುವ ಅಧಿಕಾರಿಗಳ ವಿರುದ್ಧ ಘಟಕಾಧಿಗಳು ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಂಡು ಪಾಲನಾ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ಘಟಕಾಧಿಕಾರಿಗಳು ತಮ್ಮ ಅಧೀನದಲ್ಲಿನ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿ, ಇನ್ನು ಮುಂದೆ ಯಾವುದೇ ವಾಹನಗಳಲ್ಲಿ ಪೊಲೀಸ್ ಎಂಬ ಸ್ಟಿಕರಿಂಗ್ ಇಲ್ಲದೇ ಇರುವುದು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಘಟಕಾಧಿಕಾರಿಗಳು ಸೂಕ್ತ ಶಿಸ್ತು ಕ್ರಮ ತೆಗೆದುಕೊಂಡು, ಒಂದು ವಾರದೊಳಗೆ ಈ ಕಚೇರಿಗೆ ಪಾಲನಾ ವರಿಯನ್ನು ಸಲ್ಲಿಸುವಂತೆ ಮುರುಗನ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.