ಜಿಲ್ಲೆ

ಜನರಿಗೆ ಯೋಜನೆಗಳ ಅರಿವು ಮೂಡಿಸಿ

ಪಾತಪಾಳ್ಯ: ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಬಿಳ್ಳೂರು ಗ್ರಾಮ ಪಂಚಾಯಿತಿ ಅಧ್ಯೆ ಕೆ.ನಿರ್ಮಲಾ ತಿಳಿಸಿದರು.

ಬಿಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ರೋಜ್​ಗಾರ್​ ಯೋಜನೆ, ಮನೆ ಇದಲ್ಲದವರಿಗೆ ಮನೆ, ನಿವೇಶನ ರಹಿತರಿಗೆ ನಿವೇಶನ, ಶುದ್ಧ ನೀರಿನ ಟಕ ಮುಂತಾದವು ಅನುಷ್ಠಾನಕ್ಕೆ ತಂದಿದ್ದರೂ ಅವುಗಳ ಬಗ್ಗೆ ಜನರಿಗೆ ಅರಿವಿಲ್ಲದಂತಾಗಿದೆ. ಗ್ರಾಪಂ ಸದಸ್ಯರು, ಸಿಬ್ಬಂದಿ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಉಪಾಧ್ಯಕ್ಷ ಶಿವ ಮಾತನಾಡಿ, ಗ್ರಾಮ ಸ್ವಚ್ಛತೆಯೊಂದಿಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು. ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಗಿಡ ನೆಟ್ಟು ಪರಿಸರ ಅಭಿವೃದ್ಧಿ ಪಡಿಸಬೇಕು. ನೀರಿನ ಸಮಸ್ಯೆ ನಿವಾರಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದರು. ಪಿಡಿಒ ವಿ.ಭಾಗ್ಯಲಕ್ಷಿ$್ಮ ಮಾತನಾಡಿ, ನರೇಗಾ ಯೋಜನೆಯಲ್ಲಿ ಶೌಚಗೃಹ ನಿರ್ಮಿಸಿಕೊಳ್ಳಲು ಅನುಕೂಲವಿದ್ದು, ಪ್ರತಿಯೊಬ್ಬರೂ ಶೌಚಗೃಹ ನಿರ್ಮಿಸಿಕೊಂಡು ಗ್ರಾಮ ನೈರ್ಮಲ್ಯ ಕಾಪಾಡಬೇಕು. ರಸ್ತೆಗಳಲ್ಲಿ ತ್ಯಾಜ್ಯ ಹಾಕದೆ ಗ್ರಾಮ ಪಂಚಾಯಿತಿಯಿಂದ ನೀಡಿರುವ ಕಸದ ಬುಟ್ಟಿಯಲ್ಲಿ ಹಾಕಿ ಸ್ವಚ್ಛತೆ ಕಾಪಾಡಬೇಕು. ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದು ಎಚ್ಚರ ವಹಿಸಬೇಕು. ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು.

ಜಲಗಾರರು ತಮಗೆ ನಿರ್ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ಮಾಡಬೇಕು. ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡಾಗ ಗ್ರಾಮ ಪಂಚಾಯತಿ ಸದಸ್ಯರಿಗೆ, ಕಚೇರಿ ಸಿಬ್ಬಂದಿ ಗಮನಕ್ಕೆ ತರಬೇಕು ಎಂದರು. ಗ್ರಾಪಂ ಸದಸ್ಯರಾದ ಕೆ.ಶ್ರೀದೇವಿ, ಎಂ.ವಿ.ಶಂಕರಪ್ಪ, ಭಾಸ್ಕರರೆಡ್ಡಿ, ಚಂದ್ರ, ಶಿವಪ್ಪ, ಕರ ವಸೂಲಿಗಾರ ಎಲ್​. ನಾಗರಾಜ, ಡಿಇಒ ಆರ್​.ಸುರೇಶ್​, ಕಚೇರಿ ಸಹಾಯಕ ವಿ.ಕೆ.ವೆಂಕಟೇಶ್​, ಕಾಯಕ ಮಿತ್ರ ರವಣಮ್ಮ, ವಿ.ಆರ್​.ಡ್ಲೂ ನಾರಾಯಣಸ್ವಾಮಿ ಇದ್ದರು.