ರಾಮಸಾಗರದಲ್ಲಿ ಗ್ರಾಮೀಣ ಸಂತೆ ಕಾರ್ಯಕ್ರಮ ನಡೆಯಿತು. ಶಾಸಕ ಜೆ.ಎನ್.ಗಣೇಶ್, ಗ್ರಾಪಂ ಅಧ್ಯಕ್ಷೆ ಆಶಾ, ಪ್ರಮುಖರಾದ ರಾಜೇಂದ್ರ, ಎಚ್.ಶಿವಶಂಕರಗೌಡ, ಕರೆಂಟ್ ಗೋಪಾಲಪ್ಪ, ಎನ್.ಮಲ್ಲಿಕಾರ್ಜುನ, ಲಲಿತಮ್ಮ ಇತರರಿದ್ದರು. 
ಜಿಲ್ಲೆ

ಹಣ ಉಳಿತಾಯ ಮಾಡಿ ಸಬಲರಾಗಿ

ರುದ್ರಪ್ಪ ವಾಲಿ

ಕಂಪ್ಲಿ: ಗ್ರಾಮೀಣ ಸಂತೆ ಮಹಿಳೆಯರಿಗೆ ವರದಾನವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ರಾಮಸಾಗರ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ತಾಪಂ, ಗ್ರಾಪಂ ಸಹಕಾರದೊಂದಿಗೆ ಸಮೃದ್ಧಿ ಸಂಜೀವಿನಿ ವಾರದ ಸಂತೆ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಹಣ ಉಳಿತಾಯ ಮಾಡಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಮಾತನಾಡಿ, ವಾರದ ಸಂತೆಯು ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಪಟ್ಟಣಕ್ಕೆ ಹೋಗಿ ಸಂತೆ ಮಾಡುವ ಬದಲಿಗೆ ಸ್ಥಳೀಯವಾಗಿ ವಸ್ತುಗಳು ದೊರೆತಲ್ಲಿ ಸಂಚಾರ ವೆಚ್ಚ ಉಳಿತಾಯವಾಗಲಿದೆ. ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಆರ್ಥಿಕ ಅನುಕೂಲವಾಗಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಆಶಾ, ಪಿಡಿಒ ಎನ್.ಮಲ್ಲಿಕಾರ್ಜುನ, ಪ್ರಮುಖರಾದ ಎಚ್.ಶಿವಶಂಕರಗೌಡ, ಕರೆಂಟ್ ಗೋಪಾಲಪ್ಪ, ಬಿ.ನಾರಾಯಣಪ್ಪ, ಎಚ್.ಜಗದೀಶಗೌಡ, ಸಮೃದ್ಧಿ ಒಕ್ಕೂಟದ ಅಧ್ಯಕ್ಷೆ ಲಲಿತಮ್ಮ, ಸದಸ್ಯೆಯರಿದ್ದರು.