ಜಿಲ್ಲೆ

ಐತಿಹಾಸಿ ಸ್ಥಳಗಳನ್ನು ಪ್ರವಾಸಿ ತಾಣವಾಗಿಸಿ

ಕೃಷ್ಣ ಕುಲಕರ್ಣಿ

ಸೇಡಂ: ಮಳಖೇಡ, ಬಿಜನಹಳ್ಳಿ, ಹಂದರಕಿ, ಮೇದಕ, ಯಾನಾಗುಂದಿ ಸೇರಿ ವಿವಿಧ ಗ್ರಾಮಗಳಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ತಾಣವಾಗಿಸಲು ಸರ್ಕಾರ ಮುಂದಾಗಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಒತ್ತಾಯಿಸಿದರು.

ಗುರುವಾರ ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದ ಅವರು, ತಾಲೂಕಿನಲ್ಲಿ ಬಾಣಂತಿ ಕಂಬ, ಮಳಖೇಡದ ಕೋಟೆ, ಪಂಚಲಿAಗೇಶ್ವರ ದೇವಾಲಯ, ಮೇದಕನ ಚನ್ನಕೇಶ್ವರ, ಮೋತಕಪಲ್ಲಿಯ ಶ್ರೀ ಬಲಭೀಮಸೇನ, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ದೇಗುಲಗಳಿವೆ. ಅವುಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸಲು ಅಗತ್ಯ ನಿರ್ಣಯ ಬೆಳಗಾವಿ ಅಧಿವೇಶನದಲ್ಲಿ ಕೈಗೊಳ್ಳಬೇಕು. ಇಲ್ಲಿನ ಸಮಗ್ರ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.

ಕರವೇ ಪದಾಧಿಕಾರಿಗಳಾದ ಮಹೇಶ ಪಾಟೀಲ್, ಚಂದ್ರಶೇಖರ ಪೂಜಾರಿ, ದೇವು ನಾಟೀಕರ್, ಭೀಮಯ್ಯ ಗುತ್ತೇದಾರ್, ಪ್ರವೀಣ ಕೋಡ್ಲಾ, ಮಹೇಶರೆಡ್ಡಿ, ಭೀಮಾಶಂಕರ ನಾಟೀಕರ್, ಚಂದ್ರಶೇಖರ ರಂಜೋಳ, ಪವನ ಕುಲಕರ್ಣಿ, ರವಿ ಮದರಿ, ರಾಘವೇಂದ್ರ ಕಡಚರ್ಲಾ, ವೆಂಕಟೇಶ ಕೋಡ್ಲಾ, ಅಭಿಷೇಕ ರೆಡ್ಡಿ, ಅನೀಲ ಮದನಾ, ವಿಶ್ವಾರಾಧ್ಯ, ರಘು ಹೂಡಾ ಇತರರಿದ್ದರು.