ಮುಳಬಾಗಿಲಿನ ತಾಪಂ ಆವರಣದಲ್ಲಿರುವ ಆರ್ಥಿಕ ಸಾಕ್ಷರತಾ ಕೇಂದ್ರದಲ್ಲಿ ತಾಲೂಕಿನ ಮಡಿವಾಳ ಗ್ರಾಮದ ಸೀತಮ್ಮ ಅವರಿಗೆ ವಿಮೆ ಹಣ 2 ಲಕ್ಷ ರೂ.ಗಳನ್ನು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಕೆ. ಸುಬ್ಬು ನಾಯಕ್​ ವಿತರಿಸಿದರು. ಮುಳಬಾಗಿಲಿನ ಯೂನಿಯನ್​ ಬ್ಯಾಂಕ್​ನ ಸಹಾಯಕ ವ್ಯವಸ್ಥಾಪಕ ಮಂಜುನಾಥ್​, ಆರ್ಥಿಕ ಸಾಕ್ಷರತಾ ಸಲಹೆಗಾರ್ತಿ ಅಂಬಿಕಾ ಮಂಜುನಾಥ ಇದ್ದರು. 
ಜಿಲ್ಲೆ

ಕೇಂದ್ರ ಸರ್ಕಾರದ ವಿಮೆ ಸೌಲಭ್ಯ ಸದ್ಬಳಕೆಯಾಗಲಿ

ವಿಜಯವಾಣಿ ಸುದ್ದಿಜಾಲ ಮುಳಬಾಗಿಲು

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ಸದ್ಬಳಸಿಕೊಳ್ಳುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್​ ವ್ಯವಸ್ಥಾಪಕ ಕೆ. ಸುಬ್ಬ ನಾಯಕ್​ ತಿಳಿಸಿದರು.

ನಗರದ ಆರ್ಥಿಕ ಸಾಕ್ಷರತಾ ಕೇಂದ್ರದಲ್ಲಿ ಬುಧವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್​ನಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತಾ ಯೋಜನಾ ಶ್ಯಾಚುರೇಷನ್​ ಅಭಿಯಾನದಲ್ಲಿ ಮಾತನಾಡಿದರು.

ಪಿಎಂಜೆಜೆಪಿವೈ ಯೋಜನೆಯಡಿ ಗ್ರಾಹಕರು ವಾರ್ಷಿಕ 436 ರೂ. ವಿಮೆ ಪಾವತಿಸಿದರೆ ಯಾವುದೇ ರೀತಿಯ ಸಾವು ಸಂಭವಿಸಿದರೆ 2 ಲಕ್ಷ ರೂ. ಹಾಗೂ ಪಿಎಂ ಸುರಾ ಭೀಮಾ ಯೋಜನೆಯಡಿ 20 ರೂ. ಪಾವತಿಸುವ ಮೂಲಕ ಅಪಘಾತಗಳು ಒಳಗೊಂಡಂತೆ ವಿದ್ಯುತ್​ ಅವಘಡ, ಹಾವು ಕಚ್ಚಿ, ಹೃದಯಘಾತ, ಕಾಡುಪ್ರಾಣಿಗಳ ದಾಳಿ ಮತ್ತಿತರ ಅಪಘಾತ ಸಂಬಂಧಿಸಿದ ಸಾವುಗಳು ಸಂಭವಿಸಿದಾಗ 2 ಲಕ್ಷ ರೂ. ವಿಮೆ ಪಡೆಯಬಹುದು ಎಂದರು.

ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಮಡಿವಾಳದ ಎನ್​. ಎಂ.ಮಂಜುನಾಥ್​ ಮಾ.28ರಂದು ನಿಧನರಾಗಿದ್ದರಿಂದ ಅವರ ತಾಯಿ ಸೀತಮ್ಮ (70)ಗೆ ಇನ್ಶೂರೆನ್ಸ್​ ಮೊತ್ತ 2 ಲಕ್ಷ ರೂ. ಚೆಕ್​ಅನ್ನು ವಿತರಿಸಿ, 8 ದಿನಗಳಲ್ಲಿ ಯೂನಿಯನ್​ ಬ್ಯಾಂಕ್​ ಮುಳಬಾಗಿಲು ಶಾಖೆಯಿಂದ ಹಣ ನೀಡಲಾಗಿದೆ ಎಂದರು. ಆರ್ಥಿಕ ಸುರಕ್ಷತಾ ಸಲಹೆಗಾರ್ತಿ ಅಂಬಿಕಾ ಮಂಜುನಾಥ್​ ಮಾತನಾಡಿ, ಬ್ಯಾಂಕಿನಲ್ಲಿ ಖಾತೆ ತೆರೆದಿರುವ ಪ್ರತಿಯೊಬ್ಬ ಬ್ಯಾಂಕಿನಲ್ಲಿ ವಿಮೆ ಮಾಡಿಸಬೇಕೆಂದು ಮಾಹಿತಿ ನೀಡಿ ಪಿಎಂಜೆಜೆಪಿವೈ, ಪಿಎಂಎಸ್​ಪಿವೈನ ಪ್ರಮುಖ್ಯತೆಯ ಬಗ್ಗೆ ತಿಳಿಸಿ ಮುಳಬಾಗಿಲು ತಾಲೂಕಿನ ಜನ ಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. 18 ರಿಂದ 50 ಹಾಗೂ 18 ರಿಂದ 70 ವಯಸ್ಸಿನ ಪ್ರತಿಯೊಬ್ಬರು ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸೆ.30 ಒಳಗೆ ಜಿಲ್ಲಾದ್ಯಂತ ಎಲ್ಲ ಬ್ಯಾಂಕ್​ನ ಗ್ರಾಹಕರು ಈ ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಯೂನಿಯನ್​ ಬ್ಯಾಂಕ್​ ಅಸ್ಟಿಟೆಂಟ್​ ಮ್ಯಾನೆಜರ್​ ಮಂಜುನಾಥ್​ ತಿಳಿಸಿದರು. ಈ ವಿಮೆಯ ಫಲಾನುಭವಿಗಳಾದ ಸೀತಮ್ಮ ಮತ್ತು ಮಕ್ಕಳಾದ ಜಯಲಕ್ಚಷ್ಮಮ್ಮ ಹಾಗೂ ಎಲ್​ ಮತ್ತು ಫೈನಾನ್ಸ್​ ಹಾಗೂ ಆಕ್ಸೀಸ್​ ಲೈವಿಲ್ಲಿ ವುಡ್ಸ್​ ಸಹಯೋಗದ ಡಿಜಿಟಲ್​ ಸಖಿ ತಾಲೂಕು ಸಂಯೋಜಕರು ಎಸ್​. ಶ್ವೆತಾ, ಡಿಜಿಟಲ್​ ಸಖಿ ಸರಸ್ವತಿ ಇದ್ದರು.